ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಹಾನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳೇನೋ ವ್ಯಾಪಕ ಪ್ರಮಾಣದಲ್ಲಿ ನಡೆಯುತ್ತಿವೆ. ಆದರೆ ಕೆಲ ಅಪೂರ್ಣ ಕಾಮಗಾರಿಗಳು ಪ್ರಾಣಘಾತುಕ ರೀತಿಯಲ್ಲಿ ನನೆಗುದಿಗೆ ಬಿದ್ದಿರುತ್ತಿದ್ದು, ಇಂಥಲ್ಲಿ ಅವಘಡಗಳು ಸಂಭವಿಸುವ ಮುನ್ನ ಈ ಬಗ್ಗೆ ಲಕ್ಷ್ಯ ವಹಿಸುವವರೇ ಕಡಿಮೆ.
ನಾನಾವಾಡಿಯ ಅಂಗಡಿ ಕಾಲೇಜ್ ಎದುರು ಇದೇ ರೀತಿ ಅಪಾಯ ಸೃಷ್ಟಿಯ ಮೂಲವಾಗಿ ಅಪೂರ್ಣಗೊಂದ್ದ ರಸ್ತೆಯಲ್ಲಿ ಹೊಂಡದ ತೇಪೆ ಕಾಣಿಸದ ಕಾರಣ ಹಲವಾರು ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ ಜನಪರ ಕಾಳಜಿಯಿಂದ ಯಂಗ್ ಬೆಳಗಾವಿ ಪ್ರತಿಷ್ಠಾನದ ವತಿಯಿಂದ ಸೋಮವಾರ ಈ ರಸ್ತೆಯ ಅಪೂರ್ಣಗೊಂಡ ಭಾಗಕ್ಕೆ ಬೇಲಿ ಹಾಕಿ, ಕೆಂಪು ಬಟ್ಟೆ ಸುತ್ತಿ ಸಂಚಾರಿಗಳು ಎಚ್ಚರದಿಂದ ಸಂಚರಿಸಲು ಅನುವು ಮಾಡಿಕೊಡಲಾಗಿದೆ.
ಈ ವೇಳೆ ಮಾತನಾಡಿದ ಅಲನ್‌ವಿಜಯ್ ಮೋರೆ, ಬಾಕಿ ಉಳಿದಿರುವ ಕಾಮಗಾರಿಗಳನ್ನು ಆದಷ್ಟು ಬೇಗ ಮುಗಿಸುವಂತೆ ಗುತ್ತಿಗೆದಾರರಿಗೆ ಮನವಿ ಮಾಡಿ, ಗುಂಡಿಗಳಿರುವ ರಸ್ತೆ ಹಾಗೂ ಅಪೂರ್ಣ ಕಾಮಗಾರಿಯನ್ನು ಗುರುತಿಸಿ ಅಪಘಾತಗಳನ್ನು ತಪ್ಪಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಈ ಸಮಯದಲ್ಲಿ ಚೆರಿಲ್ ವಿಜಯ್ ಹೆಚ್ಚು, ಸೋನಿಯಾ ಫ್ರಾನ್ಸಿಸ್, ಶ್ರೀನಿಧಿ ಹೆಚ್, ಶುಭಂ ಸಿ, ಸಂಸ್ಕಾರ್ ಸಿ, ಸಿದ್ಧಾರ್ಥ್ ಆರ್, ಅಕ್ಷಯ್ ಎಂ, ಅದ್ವೈತ್ ಚವನಪಾಟೀಲ್, ಜೇ ಎಸ್, ದೇವ್ ಜೈನ್, ಓಂಕಾರ್ ಬಿ, ಆರ್ಯನ್ ಎನ್, ಧ್ರುವ ಹೆಚ್, ನಿತಿನ್ ಕೆ, ಕಾರ್ತಿಕ್ ಪಿ.ಎಲ್., ಲಕ್ಕಿ ಎಸ್ , ಮತ್ತಿತರರು ಉಪಸ್ಥಿತರಿದ್ದರು.
ಅವಿವೇಕದ ನಿರ್ಧಾರ ಯಾರದ್ದು? ಕೃಷಿ ಭೂಮಿ ಮುಖ್ಯವೋ? ವಿಮಾನ ನಿಲ್ದಾಣ ಮುಖ್ಯವೋ?
https://pragati.taskdun.com/whose-decision-is-unwise-is-agricultural-land-important-is-the-airport-important/
*ತಂದೆಯನ್ನೇ ಬರ್ಬರವಾಗಿ ಹತ್ಯೆಗೈದ ಮಕ್ಕಳು*
https://pragati.taskdun.com/shivamoggamurder-case5-arrested/
ಗ್ರಾಮೀಣ ಮಟ್ಟಕ್ಕೂ ಸ್ಕೇಟಿಂಗ್ ವಿಸ್ತರಣೆ: ಸಿಎಂ ಬೊಮ್ಮಾಯಿ
https://pragati.taskdun.com/extension-of-skating-to-rural-level-cm-bommai/
*ಸಿದ್ದರಾಮಯ್ಯ ವಿರುದ್ಧ ಅಖಾಡಕ್ಕಿಳಿಯಲು ಸಜ್ಜಾದ ಬಿ.ವೈ.ವಿಜಯೇಂದ್ರ?; ವರುಣ ನನ್ನ ಪಂಚಪ್ರಾಣ ಎಂದಿದ್ದೇಕೆ?*
https://pragati.taskdun.com/vidhanasabha-electionsiddaramaiahb-y-vijayendravaruna/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ