*ಮರಾಠಿ ಬ್ಯಾನರ್ ಖಂಡಿಸಿ ಪ್ರತಿಭಟಿಸಿದ ಯುವ ರಕ್ಷಣಾ ವೇದಿಕೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗಣೇಶ ಹಬ್ಬದ ಸಂದರ್ಭದಲ್ಲಿ ಶುಭಕೋರುವ ಬ್ಯಾನರಗಳು ಬೆಳಗಾವಿ ನಗರದಲ್ಲಿ ಎಲ್ಲೆಂದರಲ್ಲಿ ರಾರಾಜಿಸುತ್ತಿದ್ದು, ಇದನ್ನು ವಿರೋಧಿಸಿ ಕರ್ನಾಟಕ ಯುವ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಗುರುವಾರ ಮಹಾನಗರ ಪಾಲಿಕೆ ಆವರಣದಲ್ಲಿ ಮಹಾನಗರ ಪಾಲಿಕೆಯ ನಡೆ ಖಂಡಿಸಿ ಕರ್ನಾಟಕ ಯುವ ರಕ್ಷಣಾ ವೇದಿಕೆಯ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಹಾನಗರ ಪಾಲಿಕೆ ಮತ್ತು ಪಾಲಿಕೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಲಾಯಿತು.
ಈ ವೇಳೆ ಮಾತನಾಡಿದ ಕರ್ನಾಟಕ ಯುವ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಬಸವರಾಜ ತುಬಾಕಿ ಅವರು, ಬೆಳಗಾವಿ ನಗರದ ಬೀದಿ ಬೀದಿಗಳಲ್ಲಿ ಸಂಪೂರ್ಣ ಎರಡು ಬದಿಗಳಲ್ಲಿ ಮರಾಠಿ ಫಲಕಗಳು ಹಾಕಿದ್ದಾರೆ. ಇದು ಅಧಿಕಾರಿಗಳ ಗಮನಕ್ಕೆ ಬರದೇ ಇರುವುದು ದುರದೃಷ್ಟಕರ ಸಂಗತಿ, ತಾವುಗಳು ಕೂಡ ರಾಜಕಾರಣಿಗಳ ತರಹ ವರ್ಥಿಸುತ್ತಿದ್ದು, ಇದು ಸರಿಯಾದ ಮಾರ್ಗ ಅಲ್ಲ. ನಾವು ಎಲ್ಲಾ ಜಾತಿ ಧರ್ಮದವರು ಸಂಘಟನೆಯಲ್ಲಿ ಯಾವುದೇ ಆಚರಣೆಗಳಿಗೆ ವಿರೋಧಿಗಳು ಅಲ್ಲ ಆದರೆ ನಮ್ಮ ಭಾಷೆ ಮತ್ತು ಗಡಿ ವಿಚಾರಕ್ಕೆ ಬಂದರೆ ಸಹಿಸಲು ಆಗುವದಿಲ್ಲ. ಕಾರಣ ತಕ್ಷಣವೇ ಮರಾಠಿ ನಾಮಫಲಕ ತೆರವು ಗೊಳಿಸಿ. ಇಲ್ಲ ನಾವು ಆ ಕಾರ್ಯಕ್ಕೆ ಮುಂದಾಗಬೇಕಾಗುತ್ತೆ. ದಯವಿಟ್ಟು ತಮ್ಮ ಕರ್ತವ್ಯ ಅರಿತು ಕಾರ್ಯಪ್ರವೃತ್ತರಾಗಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ