
ಪ್ರಗತಿವಾಹಿನಿ ಸುದ್ದಿ; ರಾಯಚೂರು: ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರ ನಡುವೆ ಮಾರಾಮಾರಿ ನಡೆದಿದ್ದು, ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಬೆಂಬಲಿಗ ಆರಿಫ್ ಹಾಗೂ ಕಾರ್ಪೊರೇಟರ್ ತಿಮ್ಮಾರೆಡ್ಡಿ ಆಪ್ತ ಮೊಹಮ್ಮದ್ ನಡುವೆ ಗಲಾಟೆ ನಡೆದಿದೆ. ಎರಡೂ ಪಕ್ಷದ ಮುಖಂಡರ ಬೆಂಬಲಿಗರು ರಾಯಚೂರಿನ ಅಂದ್ರೂನ್ ಖಿಲ್ಲಾ ಬಡಾವಣೆಯಲ್ಲಿ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದಾರೆ.
ಘಟನೆಯಲ್ಲಿ ಬಿಜೆಪಿ ಮುಖಂಡ ಆರೀಫ್ ನ ಮೂರು ಬೆರಳುಗಳು ಕಟ್ ಆಗಿವೆ. ಕಾಂಗ್ರೆಸ್ ಮುಖಂಡ ಮೊಹಮ್ಮದ್ ಗೂ ಗಾಯಗಳಾಗಿದ್ದು, ಇಬ್ಬರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
https://pragati.taskdun.com/b-s-yedyurappabjp-candidate-listtodayannounce/