Karnataka News

*ಪ್ರೇಯಸಿ ತಾಯಿಯ ಚಿಕಿತ್ಸೆಗಾಗಿ ಸರಗಳ್ಳತನಕ್ಕಿಳಿದ ಡಾನ್ಸ್ ಮಾಸ್ಟರ್: ಆರೋಪಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಪ್ರೀತಿಸಿದ ಹುಡುಗಿಯ ತಾಯಿಯ ಚಿಕಿತ್ಸೆಗಾಗಿ ಡಾನ್ಸ್ ಮಾಸ್ಟರ್ ಓರ್ವ ಕಳ್ಳತನಕ್ಕೆ ಇಳಿದು ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ.

ಗದಗ ಜಿಲ್ಲೆಯ ಲಕ್ಷ್ಮೀಶ್ವರ ತಾಲೂಕಿನ ಹುಲ್ಲೂರು ನಿವಾಸಿ ಸೈಯ್ಯದ್ ಅಲಿ ಬಾಳಸಾಹೇಬ್ ನಡಾಫ್ (25) ಬಂಧಿತ ಆರೋಪಿ. ಈತ ತನ್ನ ಪ್ರೇಯಸಿಯ ತಾಯಿಯ ಹೃದಯಸಂಬಂಧಿ ಕಾಯಿಲೆಗೆ ಚಿಕಿತ್ಸೆ ಕೊಡಿಸಲು ಚೈನ್ ಕಳ್ಳತನಕ್ಕೆ ಇಳಿದಿದ್ದಾನೆ.

ಜಿಗಣಿಯ ರತ್ನಮ್ಮ ಎಂಬುವವರ ಸರವನ್ನು ಕಳೆದ ಅಕ್ಟೀಬರ್ ನಲ್ಲಿ ನಡಾಫ್ ಕದ್ದಿದ್ದ. ಬುಲೆಟ್ ಬೈಕ್ ನಲ್ಲಿ ಬಂದು ಸಿಗರೇಟ್ ಖರೀದಿಸುವ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದ. ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

Home add -Advt

ಬಂಧಿತ ಆರೋಪಿಯಿಂದ ಪೊಲೀಸರು 8 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, 2 ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಹಿಂದೆ ಆರೋಪಿ ಕಳ್ಳತನ ಪ್ರಕರಣ ಸಂಬಂಧ ಗದಗದಲ್ಲಿಯೂ ಬಂಧನಕ್ಕಿಡಾಗಿದ್ದ. ಈ ವೇಳೆ ಪೊಲೀಸ್ ಕಸ್ಟಡಿಯಿಂದ ಎಸ್ಕೇಪ್ ಆಗಿದ್ದ. ಈತನ ವಿರುದ್ಧ ಬೆಂಅಗ್ಳೂರಿನ ಜೆಪಿ ನಗರ, ಹುಳಿಮಾವು, ಬಾಗಲಕುಂಟೆ ಠಾಣೆಯಲ್ಲ ನಾಲ್ಕು ಕೇಸ್ ಗಳು ಇವೆ.

Related Articles

Back to top button