Belagavi NewsBelgaum NewsKannada NewsKarnataka News

*ನಿಪ್ಪಾಣಿಯಲ್ಲಿ ಮೂರು ಅಂಗಡಿಗಳಲ್ಲಿ ಕಳ್ಳತನ* 

ಪ್ರಗತಿವಾಹಿನಿ ಸುದ್ದಿ:  ಚಿಕ್ಕೋಡಿ ರಸ್ತೆಯ ಮೂರು ಅಂಗಡಿಗಳಲ್ಲಿ ಶನಿವಾರ ಮಧ್ಯರಾತ್ರಿ ಕಳ್ಳತನ ನಡೆದಿದೆ.ಎಂಟು ಸಾವಿರ ನಗದು ದೋಚಿ ಕಳ್ಳರು ಪರಾರಿಯಾಗಿದ್ದಾರೆ.

ಚಿಕ್ಕೋಡಿ ರಸ್ತೆಯ ಕುಂಬಾರ ಎಲೆಕ್ಟ್ರಿಕಲ್ ಅಂಗಡಿಯಿಂದ 7 ಸಾವಿರ ರೂ. ಹೊಸೈರಿ ಅಂಗಡಿಯಿಂದ 1200 ರೂ., ಸೃಷ್ಟಿ ಮೆಡಿಕಲ್ ನಿಂದ 1200 ರೂಪಾಯಿ ದೋಚಿದ್ದಾರೆ.ಕಳ್ಳರು ಅಂಗಡಿಯ ಮೇಲ್ಛಾವಣಿ ಒಡೆದು ಒಳ ನುಗ್ಗಿದ್ದು, ಆ ಪ್ರದೇಶದಲ್ಲಿನ ಸಿಸಿಟಿವಿ ಕ್ಯಾಮರಾಗಳನ್ನು ಬಂದ್ ಮಾಡಿ ಒಳ ನುಗ್ಗಿದ್ದಾರೆ. ಗಣೇಶೋತ್ಸವದ ಹಿನ್ನಲೆಯಲ್ಲಿ ಕಳ್ಳತನದ ಘಟನೆ ನಡೆದಿದೆ. ಹೀಗಾಗಿ ಈ ಘಟನೆಯಿಂದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.ನಿಪ್ಪಾಣಿ ನಗರದಲ್ಲಿ ದಿನದಿಂದ ದಿನಕ್ಕೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button