Belagavi NewsBelgaum NewsKannada NewsKarnataka News

*ಎಪಿಎಂಸಿ ಮಾರುಕಟ್ಟೆಯ ಎರಡು ಅಂಗಡಿಯಲ್ಲಿ ಕಳ್ಳತನ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ನಗರದ ಕೃಷಿ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಐನಾತಿ ಕಳ್ಳ ತನ್ನ ಕೈ ಚಳಕ ತೊರಿಸಿದ್ದು, ಎರಡು ಅಂಗಡಿಗಳಲ್ಲಿಳಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದಾನೆ‌. 

ಇಂದು ಬೆಳಗಾವಿಯ ಎಪಿಎಂಸಿ ಮಾರುಕ್ಟೆಯಲ್ಲಿ ಚಾಲಾಕಿ ಕಳ್ಳ ಬಂದು ಎರಡು ಅಂಗಡಿಗಳನ್ನು ದೋಚಿದ್ದಾನೆ. ಅಂಗಡಿಯ ಲಾಕರ್ ಹತ್ತಿರ ಯಾರೂ ಇಲ್ಲದ ಸಮಯ ನೋಡಿದ ಕಳ್ಳ ಸ್ಕ್ರೂ ಡ್ರೈವರ್ ನಿಂದ ಲಾಕರ್ ಮುರಿದು ಹಣ ಕದ್ದು ಪರಾರಿಯಾಗಿದ್ದಾನೆ. ಜ್ಯೋತಿರ್ಲಿಂಗ್ ಟ್ರೇಡರ್ಸ್ ನಲ್ಲಿ ಸುಮಾರು 50 ಸಾವಿರ ಹಾಗೂ ಶ್ರೀ ಎಂಟರಪ್ರೈಸ್ ನಲ್ಲಿ ನಾಕೈದು ಸಾವಿರ ಕಳ್ಳತನಾವಾಗಿದೆ.‌

ಘಟನಾ ಸ್ಥಳಕ್ಕೆ ಎಪಿಎಂಸಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸಿಸಿಟಿವಿಯಲ್ಲಿ ಕಳ್ಳನ ಕೈಚಳಕ ರೇಕಾರ್ಡ್ ಆಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಬಲೆ ಬಿಸಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button