Latest

ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ ಕದ್ದು ಪರಾರಿಯಾದ ಕಳ್ಳರು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪೊಲೀಸರ ವೇಷದಲ್ಲಿ ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ, ನಗದು ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿ ನಡೆದಿದೆ.

ವೆಂಕಟೇಶ್ ಎಂಬುವವರ ಮನೆಗೆ ತಾವು ತಿಪಟೂರು ಠಾಣೆ ಪೊಲೀಸರು ಎಂದು ಮನೆಗೆ ನುಗ್ಗಿದ ಮೂವರು, ಓರ್ವ ಕಳ್ಳ, ತಾವಿಬ್ಬರು ಪೊಲೀಸರು. ಕಳ್ಳ ನೀಡಿದ ಮಾಹಿತಿ ಪ್ರಕಾರ ಕಳುವು ಮಾಡಿದ್ದ ಚಿನ್ನಾಭರಣಗಳನ್ನು ಸ್ವೀಕರಿಸಿದ್ದೀರಾ. ಮನೆಯಲ್ಲಿದ್ದ ಆಭರಣಗಳನ್ನು ತೋರಿಸಿ ಎಂದು ಬೆದರಿಸಿದ್ದಾರೆ. ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಸುಮಾರು 600 ಗ್ರಾಂ ಚಿನ್ನ ದರೋಡೆ ಮಾಡಿ ಎಸ್ಕೇಪ್ ಆಗಿದ್ದಾರೆ. ಈ ಕುರಿತು ಮನೆ ಮಾಲೀಕ ವೆಂಕಟೇಶ್ ಇದೀಗ ಮಹಾಲಕ್ಷ್ಮಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ವೈಷ್ಣೋದೇವಿ ಮಂದಿರದಲ್ಲಿ ಕಾಲ್ತುಳಿತ; 12 ಭಕ್ತರು ಸಾವು

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button