Karnataka NewsLatest

ಟೋಯಿಂಗ್ ಮಾಡೋಕೆ ಪೊಲಿಸರಿಗೂ ಇದೆ ನಿಯಮ… ಏನದು?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 

ಬೇಕಾಬಿಟ್ಟಿ ವಾಹನ ಪಾರ್ಕಿಂಗ್ ಮಾಡಿದರೆ ವಾಹನ ಎತ್ತಿಕೊಂಡು ಹೋಗುವುದಾಗಿ ಬೆಳಗಾವಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಇದಕ್ಕಾಗಿ 2 ಟೋಯಿಂಗ್ ವಾಹನಗಳು ಬೆಳಗಾವಿಗೆ ಆಗಮಿಸಿವೆ. ಟೋಯಿಂಗ್ ಮಾಡುವುದಕ್ಕಾಗಿಯೇ ವಿಶೇಷ ತಂಡವೂ ಇದೆ. ಬೇರೆ ಬೇರೆ ವಾಹನಗಳನ್ನು ಟೋಯಿಂಗ್ ಮಾಡಿದರೆ ನಿಷೇಧಿತ ಪ್ರದೇಶದಲ್ಲಿ ಪಾರ್ಕಿಂಗ್ ಮಾಡಿದ್ದಕ್ಕೆ ದಂಡ ಕಟ್ಟುವುದಷ್ಟೆ ಅಲ್ಲ, ಅದರ 6-7 ಪಟ್ಟು ಟೋಯಿಂಗ್ ಚಾರ್ಜ್ ಕಟ್ಟಿ ವಾಹನ ಬಿಡಿಸಿಕೊಳ್ಳಬೇಕು.

ಹಾಗಾದರೆ, ಬೇಕಾಬಿಟ್ಟಿ ಪಾರ್ಕ್ ಮಾಡಿದ್ದು ಕಂಡ ತಕ್ಷಣ ಪೊಲೀಸರು ವಾಹನ ಎತ್ತಿಕೊಂಡು ಹೋಗಬಹುದಾ? 

Home add -Advt

ಖಂಡಿತ ಇಲ್ಲ, ಅವರಿಗೂ ಕೆಲವು ನಿಯಮಗಳಿವೆ.

ವಾಹನ ಮುಟ್ಟುವ ಮುನ್ನ ಆ ವಾಹನದ ಸಂಖ್ಯೆಯನ್ನು 3 ಬಾರಿ ಮೈಕ್‌ನಲ್ಲಿ ಕೂಗಬೇಕು.  ವಾಹನವನ್ನು ಟೋಯಿಂಗ್ ಮಾಡುವುದಾಗಿ ಮಾಲಿಕರಿಗೆ ಎಚ್ಚರಿಕೆ ಕೊಡಬೇಕು.

ಮಾಲಿಕರು ತಕ್ಷಣ ಸ್ಥಳಕ್ಕೆ ಬಂದರೆ ಅಂತಹ ವಾಹನಗಳನ್ನು ಟೋಯಿಂಗ್‌ ಮಾಡುವಂತಿಲ್ಲ.  ನಿಷೇಧಿತ ಪ್ರದೇಶದಲ್ಲಿ ವಾಹನ ನಿಲ್ಲಿಸಿದ್ದಕ್ಕೆ ದಂಡ ಹಾಕಬಹುದು ಅಷ್ಟೆ. 100 ರೂ. ದಂಡ ಕಟ್ಟಿದರೆ ವಾಹನ ಬಿಡಬೇಕು. 

 ವಾಹನಗಳ ಟೋಯಿಂಗ್‌ ಮಾಡುವಾಗ ವಾಹನಗಳಿಗೆ ಹಾನಿಯಾಗದಂತೆ ಎಚ್ಚರ ವಹಿಸಬೇಕು.  ಹಾನಿಯಾದರೆ ಇದಕ್ಕೆ ಪೊಲೀಸರೇ ಹೊಣೆಯಾಗುತ್ತಾರೆ. 

ಬೆಂಗಳೂರಿನಲ್ಲಿ ಇಂತಹ ಹಾನಿ ಬಗ್ಗೆ ಪ್ರತಿನಿತ್ಯ ಸಾಕಷ್ಟು ದೂರುಗಳು ಬರುತ್ತಿವೆ. ಇದನ್ನು ನಿಭಾಯಿಸುವುದಕ್ಕೇ ಪೊಲೀಸರು ಹರಸಾಹಸಪಡಬೇಕಾಗಿದೆ. 

ಎಚ್ಚರ; ಬೆಳಗಾವಿಗೂ ಬಂತು 2 ಟೋಯಿಂಗ್ ವಾಹನ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button