Politics

*ಸಂವಿಧಾನಕ್ಕಿಂತ ದೊಡ್ಡ ಧರ್ಮ ಗ್ರಂಥವಿಲ್ಲ; ರಾಷ್ಟ್ರ ಧ್ವಜಕ್ಕಿಂತ ಮಿಗಿಲಾದ ಮತ್ತೊಂದು ಧ್ವಜವಿಲ್ಲ: ಪ್ರತಾಪ್ ಸಿಂಹ*

ಪ್ರಗತಿವಾಹಿನಿ ಸುದ್ದಿ: ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದ ಹನುಮಧ್ವಜ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಶ್ರೀ ಹಿಂದೂ ಮಹಾಗಣಪತಿಯ ಅದ್ದೂರಿ ವಿಸರ್ಜನಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಸ್ಥಳೀಯ ಜೆಡಿಎಸ್‌ ನಾಯಕರು ಭಾಗವಹಿಸಿದ್ದರು.

ಇದೇ ವೇಳೆ, ಈ ಹಿಂದೆ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಕೆರಗೋಡು ಧ್ವಜಸ್ತಂಬದಲ್ಲಿ ಸದ್ಯ ಈಗ ತ್ರಿವರ್ಣ ಧ್ವಜ ಹಾರಿಸಲಾಗಿದ್ದು, ಪ್ರತಾಪ್ ಸಿಂಹ ಹಾಗೂ ಜೆಡಿಎಸ್ ಮುಖಂಡರು ಧ್ವಜಸ್ತಂಬಕ್ಕೆ ಪುಷ್ಪಾರ್ಚನೆ ಮಾಡಿ ರಾಷ್ಟ್ರ ಧ್ವಜಕ್ಕೆ ಗೌವರ ಸಲ್ಲಿಸಿದರು. ಈ ಬಗ್ಗೆ ಮಾತನಾಡಿದ ಪ್ರತಾಪ್ ಸಿಂಹ, ‘ಸಂವಿಧಾನಕ್ಕಿಂತ ದೊಡ್ಡ ಧರ್ಮ ಗ್ರಂಥವಿಲ್ಲ, ರಾಷ್ಟ್ರ ಧ್ವಜಕ್ಕಿಂತ ಮಿಗಿಲಾದ ಮತ್ತೊಂದು ಧ್ವಜವಿಲ್ಲ’ ಎಂದಿದ್ದಾರೆ.

ಇನ್ನು ಕೆರಗೋಡು ಹನುಮಧ್ವಜ ಹೋರಾಟದ ಸಂದರ್ಭದಲ್ಲಿ ಹಲವು ಹಿಂದೂಗಳ ವಿರುದ್ಧ, ಮಹಿಳೆಯರ ವಿರುದ್ಧ ರೌಡಿ ಶೀಟರ್ ಓಪನ್ ಮಾಡಲಾಗಿದ್ದು, ಇದು ಕಾಂಗ್ರೆಸ್ ಸರ್ಕಾರದ ನೀಚ ಕೃತ್ಯ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಹಿಂದೂಗಳ ಮೇಲಿನ ಕೇಸ್ ಗಳನ್ನು ಹಿಂಪಡೆಯಲಾಗುವುದು ಎಂದು ಹೇಳಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button