Belagavi NewsBelgaum NewsKannada NewsKarnataka NewsPolitics

*ರಾಜ್ಯದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲ: ಸರ್ಕಾರದ ವಿರುದ್ಧ ಕಿಡಿಕಾರಿದ  ಶಾಸಕಿ ಶಶಿಕಲಾ ಜೊಲ್ಲೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಯುವತಿಯರ ಸರಣಿ ಕೊಲೆಗಳು ರಾಜ್ಯವನ್ನೆ ಬೆಚ್ಚಿಬಿಳಿಸಿವೆ. ಯುವತಿಯರಿಗೆ ರಾಜ್ಯದಲ್ಲಿ ಸುರಕ್ಷತೆ ಇಲ್ಲ ಎಂದು ಮಾಜಿ ಸಚಿವೆ,ಶಾಸಕಿ ಶಶಿಕಲಾ ಜೊಲ್ಲೆ ಕಿಡಿಕಾರಿದರು.

ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ ಶಾಸಕಿ ಶಶಿಕಲಾ ಜೊಲ್ಲೆ ನೇಹಾ ಹಿರೇಮಠ ಕೊಲೆ ಪ್ರಕರಣ ಮಾಸುವೆ ಮುನ್ನವೇ ಇತ್ತಿಚಿಗೆ ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗರ ಕೊಲೆ ಆಗಿರುವುದು ನಿಜಕ್ಕೂ ಖಂಡನೀಯ. ಈ ಕೊಲೆ ಪ್ರಕರಣಗಳು ರಾಜ್ಯವನ್ನು ಬೆಚ್ಚಿಬಿಳಿಸಿವೆ.

ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ‌.ಶಿವಕುಮಾರ ಹಾಗೂ ಗೃಹ ಸಚಿವ ಜಿ.ಪರಮೇಶ್ವರ ಅವರಲ್ಲಿ ಮನವಿ ಮಾಡಿಕೊಳ್ಳುದೇನೆಂದರೆ  ಇತ್ತಿಚಿಗೆ ನಡೆದ ಎರಡು ಕೊಲೆಯ ಆರೋಪಿಗಳಿಗೆ ಗಲ್ಲು ಶಿಕ್ಷೆಯನ್ನು ವಿಧಿಸಬೇಕು.ಇಲ್ಲವೇ ಆರೋಪಿಗಳಿಗೆ ಜನತೆಗೆ ಒಪ್ಪಿಸಿ, ನಾವು ಹೆಣ್ಣುಮಕ್ಕಳು ಸೇರಿಕೊಂಡು ಅವರಿಗೆ ತಕ್ಕ ಪಾಠವನ್ನು ಕಲಿಸುತ್ತೇವೆ ಎಂದರು.

Home add -Advt

Related Articles

Back to top button