Kannada NewsKarnataka NewsLatest

ರಾಜ್ಯ ಸರಕಾರ -ಜಿಲ್ಲಾಡಳಿತ : ಒಂದಕ್ಕೊಂದು ತಾಳೆಯಾಗದ ವರದಿಗಳು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯಲ್ಲಿ ಈವರೆಗೆ ಬಂದಿರುವ ವರದಿಯಲ್ಲಿ ಯಾವುದೇ ಪಾಸಿಟಿವ್ ಇಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.

ಇದೀಗ ಮಾಧ್ಯಮ ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿಗಳು, ಮಧ್ಯಾಹ್ನ 12 ಗಂಟೆಯವರೆಗಿನ ಮಾಹಿತಿ ಪ್ರಕಾರ ಯಾವೊಂದೂ ಪಾಸಿಟಿವ್ ಬಂದಿಲ್ಲ ಎಂದಿದ್ದಾರೆ. ಆದರೆ ಬೆಂಗಳೂರಿನಲ್ಲಿ ರಾಜ್ಯ ಸರಕಾರಿ ಬಿಡುಗಡೆ ಮಾಡಿರುವ ಮಾಧ್ಯಮ ಪ್ರಕಟಣೆಯಲ್ಲಿ ಬೆಳಗಾವಿಯಲ್ಲಿ ಮೂವರಿಗೆ ಪಾಸಿಟಿವ್ ಬಂದಿದೆ ಎಂದು ತಿಳಿಸಿದೆ.

ಧಾರವಾಡದಲ್ಲಿ ಹೇಳಿಕೆ ನೀಡಿರುವ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರೂ ಬೆಳಗಾವಿಯಲ್ಲಿ ಮೂವರಿಗೆ ಕೊರೋನಾ ಸೋಂಕು ತಗುಲಿದೆ ಎಂದಿದ್ದಾರೆ.

ಈವರೆಗೆ 718 ಜನರ ನಿಗಾ ವಹಿಸಲಾಗಿದೆ. 175 ಜನರು 14 ದಿನದ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ. 33 ಜನರನ್ನು ಐಸೋಲೇಟೆಡ್ ವಾರ್ಡ್ ನಲ್ಲಿಡಲಾಗಿದೆ. 420 ಜನರು 14 ದಿನದ ಕ್ವಾರಂಟೈನ್ ಪೂರೈಸಿದ್ದಾರೆ. 90 ಜನರು 28 ದಿನದ ಕ್ವಾರಂಟೈನ್ ಮುಗಿಸಿದ್ದಾರೆ. 60 ಜನರ ಸ್ಯಾಂಪಲ್ಸ್ ಸಂಗ್ರಹಿಸಿ ಲ್ಯಾಬ್ ಗೆ ಕಳಿಸಲಾಗಿದೆ. ಅವರಲ್ಲಿ 27 ಜನರ ವರದಿ ಬಂದಿದ್ದು ಎಲ್ಲವೂ ನೆಗೆಟಿವ್ ಬಂದಿದೆ. ಈವರೆಗೆ ಯಾವುದೇ ಪಾಸಿಟಿವ್ ವರದಿ ಬಂದಿಲ್ಲ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

ನಿಜಾಮುದ್ದೀನ್ ಪ್ರಾರ್ಥನೆಗೆ ಮಾ.13ರಿಂದ 18ರ ವರೆಗೆ ತೆರಳಿದ್ದ 70 ವರ್ಷ, 26 ವರ್ಷ ಮತ್ತು 20 ವರ್ಷದ ಬೆಳಗಾವಿಯ ವ್ಯಕ್ತಿಗಳಿಗೆ ಸೋಂಕು ತಗುಲಿದೆ. ಇವರಿಗೆಲ್ಲ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಾಜ್ಯ ಸರಕಾರ ನೀಡಿರುವ ಮಾಧ್ಯಮ ಪ್ರಕಟಣೆ ಹೇಳಿದೆ. ಈ ರೋಗಿಗಳನ್ನು ನಂ.126, 127 ಮತ್ತು 128 ಎಂದು ಗುರುತಿಸಲಾಗಿದೆ.

ಸಚಿವ ಜಗದೀಶ ಶೆಟ್ಟರ್ ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದಾರೆ. ಆದರೆ ಜಿಲ್ಲಾಡಳಿತ ಮಾತ್ರ ಯಾವುದೇ ಪಾಸಿಟಿವ್ ಬಂದಿಲ್ಲ ಎಂದು ತಿಳಿಸಿದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button