Belagavi NewsBelgaum NewsCrimeKannada NewsKarnataka NewsNational

*ಬೈಕ್ ಮೇಲೆ ಬಂದು ವೃದ್ಧೆಯ ಚಿನ್ನದ ಸರ ಕಿತ್ತು ಎಸ್ಕೇಪ್ ಆದ ಕಳ್ಳರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಳೆದ ಐದಾರು ತಿಂಗಳುಗಳಿಂದ ಸರಗಳ್ಳತನ ಪ್ರಕರಣಗಳು ಬೆಳಗಾವಿ ನಗರದಲ್ಲಿ ನಡೆದಿರಲಿಲ್ಲ. ಆದ್ರೆ ಇಂದು ಓರ್ವ ವೃದ್ಧೆಯ ಸರ ಕಿತ್ತು ಕಳ್ಳರು ಪರಾರಿಯಾಗಿದ್ದು, ಸರಗಳ್ಳರ ಗ್ಯಾಂಗ್ ಮತ್ತೆ ಆ್ಯಕ್ಟಿವ್ ಆದ್ರಾ ಎಂದು ಜನರು ಭಯಬಿತರಾಗಿದ್ದಾರೆ.‌

ಇಂದು ಬೆಳಗಾವಿಯ ಅಜಮ್ ನಗರದ ಮೊದಲನೆ ಕ್ರಾಸ್ ನಲ್ಲಿ ಹಾಡಹಗಲೇ ಬೈಕ್ ಮೇಲೆ ಬಂದ ಇಬ್ಬರು ಕಳ್ಳರು ವೃದ್ಧೆಯ ಸರಗಳ್ಳತನ ಮಾಡಿ ಪರಾರಿಯಾಗಿದ್ದಾರೆ.‌

ಪದ್ಮಜಾ ಕುಲಕರ್ಣಿ (75) ಎಂಬ ವೃದ್ಧೆ ಮೊಮ್ಮಗನ ಜೊತೆ ಇಂದು ಮಧ್ಯಾಹ್ನ ಕೆ ಎಲ್ ಇ ಆಸ್ಪತ್ರೆಯ ಹಿಂಬದಿಯ ರಸ್ತೆಯ ಮೇಲೆ ವಾಕಿಂಗ್ ಮಾಡುತ್ತಿದ್ದರು, ಈ ವೇಳೆ ಬೈಕ್ ಮೇಲೆ ಬಂದ ಇಬ್ಬರು ಕಳ್ಳರು ಪದ್ಮಜಾ ಕುಲಕರ್ಣಿ ಕೊರಳಲ್ಲಿ ಇದ್ದ 35 ಗ್ರಾಮ್ ತೂಕದ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದಾರೆ.‌

ಕಳ್ಳರ ಚಿನ್ನದ ಸರ ಕಿತ್ತು ಪರಾರಿಯಾದ ಸಂಧರ್ಬದಲ್ಲಿ ನೆಲಕ್ಕೆ ಉರುಳಿದ ವೃದ್ಧಯೆ ಕತ್ತಿಗೆ, ಮೊಣಕೈ ಹಾಗೂ ಕಾಲಿಗೆ ಗಾಯವಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದಂತೆ ಸ್ಥಳಕ್ಕೆ ಆಗಮಿಸಿದ ಎಪಿಎಂಸಿ ಪೊಲೀಸ್ ಠಾಣೆಯ ಪೊಲೀಸರು ಘಟನೆ ನಡೆದ ಪ್ರದೇಶದಲ್ಲಿ ಸಿಸಿಟಿವಿ ಪರಿಶೀಲನೆ ನಡೆಸಿ ಕಳ್ಳರ ಪತ್ತೆಗೆ ಬಲೆ ಬಿಸಿದ್ದಾರೆ. ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Home add -Advt

Related Articles

Back to top button