Belagavi NewsBelgaum NewsCrimeKannada NewsKarnataka NewsLatest

*ತಿಲಕವಾಡಿ ಪೊಲೀಸರಿಂದ ಚೈನ್ ಕಳ್ಳನ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ತಿಲಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಆರ್‌ಪಿಡಿ ಸರ್ಕಲ್ ಹತ್ತಿರ ಇರುವ ಉದಯ ಭವನ ಹೋಟೆಲ್ ನಲ್ಲಿ ಬಂಗಾರದ ಚೈನ್ ಕಳ್ಳತನದ ಮಾಡಿದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ತಿಲಕವಾಡಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ : 133/2025 ಕಲಂ:303(2) ಬಿಎನ್‌ಎಸ್-2023 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.  ಪ್ರಕರಣದ ತನಿಖೆ ನಡೆಸಿದ ಪೊಲೀಸರು ಅವಿನಾಶ ರುದ್ರಪ್ಪ ಐರಸಂಗ (39) ಎಂಬ ಕಳ್ಳನನ್ನು ಬಂಧಿಸಿದ್ದಾರೆ.

ಬಂಧಿತನಿಂದ 8.48 ಗ್ರಾಂ ತೂಕದ 95,000 ರುಯ ಬೆಲೆಯ ಬಗಾರದ ಚೈನ್ ಹಾಗೂ 8 ಸಾವಿರ ಮೌಲ್ಯದ ಮೋಬೈಲ್ ವಶಕ್ಕೆ ಪಡೆಯಲಾಗಿದೆ‌. 

ಹೀಗೆ ಒಟ್ಟು 1,03,000 ರೂ ಮೌಲ್ಯದ ಸ್ವತ್ತನ್ನು ಜಪ್ತ ಪಡೆಸಿಕೊಂಡು ಆರೋಪಿ ವಿರುದ್ಧ ಕಾನೂನು ಕ್ರಮ ಜರುಗಿಸಿ, ತನಿಖೆ ಮುಂದುವರೆಸಲಾಗಿದೆ.

Home add -Advt

Related Articles

Back to top button