
ಪ್ರಗತಿವಾಹಿನಿ ಸುದ್ದಿ, ಮಂಡ್ಯ: ಮಾರುಕಟ್ಟೆಯಲ್ಲಿ ಒಂದು ಹೊಂಡಾ ಆ್ಯಕ್ಟಿವಾ ಸ್ಕೂಟರ್ ಬೆಲೆ ಹೆಚ್ಚೆಂದರೆ 70- 80 ಸಾವಿರ ಇರಬಹುದು. ಆದರೆ ಇಲ್ಲೊಬ್ಬ ಕಾಂಗ್ರೆಸ್ ಅಭ್ಯರ್ಥಿ ಇದಕ್ಕೆ 90 ಲಕ್ಷ ರೂ. ಖರ್ಚು ಮಾಡಿ ಕೊಂಡಿದ್ದಾರಂತೆ !
“ಅದೆಂಥ ಸ್ಕೂಟರ್ ಇರಬಹುದು?, ಬೆಳ್ಳಿ ಬಂಗಾರದ ಲೇಪನವೇನಾದರೂ ಇದೆಯಾ?” ಅಂತ ಪ್ರತಿಯೊಬ್ಬರೂ ಪ್ರಶ್ನಿಸುವುದು ಸಾಮಾನ್ಯ. ಆದರೆ ಮಂಡ್ಯ ಜಿಲ್ಲೆಯ ಮದ್ದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕದಲೂರು ಉದಯ ಅವರು ಚುನಾವಣೆಗೆ ನಾಮಪತ್ರ ಸಲ್ಲಿಕೆ ವೇಳೆ ನೀಡಿದ ಆಸ್ತಿ ವಿವರದಲ್ಲಿ ಸಾಮಾನ್ಯ ಹೊಂಡಾ ಆ್ಯಕ್ಟಿವಾ-125ನ ಬೆಲೆ 93,03,730 ರೂ. ತೋರಿಸಿದ್ದಾರೆ.
ಈ ವಿಷಯ ತಿಳಿಯುತ್ತಲೇ ಮದ್ದೂರು ಕ್ಷೇತ್ರದ ಜನಸಾಮಾನ್ಯರೆಲ್ಲ ಹೌಹಾರಿದ್ದಾರೆ! ಈ ಬೆಲೆಯಲ್ಲಿ ಅಭ್ಯರ್ಥಿ ಐದಾರು ಐಷಾರಾಮಿ ಕಾರುಗಳನ್ನೇ ಖರೀದಿಸಬಹುದಿತ್ತು ಎಂದು ಉಸುರಿದ್ದಾರೆ.
ನಾಮಪತ್ರಗಳ ಸಲ್ಲಿಕೆ ಪ್ರಕ್ರಿಯೆ ನಿನ್ನೆಯೇ ಮುಗಿದಿದ್ದು ಇಂದು ಅವುಗಳ ಪರಿಶೀಲನೆ ನಡೆಯಲಿದೆ. ಈ ವೇಳೆ 90 ಲಕ್ಷದ ಬೈಕ್ ರಹಸ್ಯ ಏನೆಂಬುದು ತಿಳಿಯಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ