EducationLatestNational

*ನೀಟ್‌-ಪಿಜಿ 2026ರ ಫಲಿತಾಂಶ ಪ್ರಕಟ*

ಪ್ರಗತಿವಾಹಿನಿ ಸುದ್ದಿ: ನೀಟ್‌-ಪಿಜಿ- 2026ರ ಫಲಿತಾಂಶವನ್ನ ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ ಇನ್ ಮೆಡಿಕಲ್ ಸೈನ್ಸಸ್ (NBEMS) ಪ್ರಕಟಿಸಿದೆ.

720 ಅಂಕಗಳಿಗೆ 641 ಅಂಕಗಳನ್ನು ಗಳಿಸಿದ ಅಭ್ಯರ್ಥಿಯು ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಬಾರಿಯ ಫಲಿತಾಂಶದಲ್ಲಿ ಅಗ್ರ ರ್‍ಯಾಂಕ್‌ಗಳಿಗೆ ಸ್ಪರ್ಧೆ ತೀವ್ರವಾಗಿತ್ತು. ದ್ವಿತೀಯ ರ್‍ಯಾಂಕ್‌ನಲ್ಲಿ 633 ಅಂಕಗಳನ್ನು ಗಳಿಸಲಾಗಿದ್ದು, ತೃತೀಯ ರ್‍ಯಾಂಕ್‌ಗೆ 626 ಅಂಕಗಳು ಲಭಿಸಿವೆ. ಒಟ್ಟಾರೆಯಾಗಿ, ಈ ವರ್ಷದ ನೀಟ್ ಪಿಜಿ ಪರೀಕ್ಷೆಯಲ್ಲಿ 20 ಅಭ್ಯರ್ಥಿಗಳು ಟಾಪ್ ಸ್ಥಾನಗಳನ್ನು ಗಳಿಸಿದ್ದಾರೆ.

ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಆಕಾಂಕ್ಷಿಗಳು ಈ ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿದ್ದರು.

ಕಳೆದ ಆಗಸ್ಟ್ 30ರಂದು NEET-PG ಪರೀಕ್ಷೆ ನಡೆದಿತ್ತು. ಒಟ್ಟು ದೇಶದ 339 ನಗರದ 1,111 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. 2,73,096 ಅಭ್ಯರ್ಥಿಗಳ ಪೈಕಿ 2,65,980 ಪರೀಕ್ಷೆ ಬರೆದಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button