Latest

ಇದೊಂದು ರಾಜಕೀಯ ಸ್ಟಂಟ್ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮೇಕೆದಾಟು ಯೋಜನೆ: ಪ್ರಧಾನಮಂತ್ರಿಗಳಿಗೆ ತಮಿಳುನಾಡು ಪತ್ರ :

**

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಮೇಕೆದಾಟು ಯೋಜನೆಯ ಬಗ್ಗೆ ತಮಿಳುನಾಡು ಸರ್ಕಾರ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿರುವುದು ಒಂದು ರಾಜಕೀಯ ಸ್ಟಂಟ್ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಕಾವೇರಿ ನದಿ ಮೇಲ್ವಿಚಾರಾಣಾ ಮಂಡಳಿಯು ಡಿಪಿಆರ್ ಅನುಮೋದನೆ ಮಾಡಬೇಕೆಂದು ಕೇಂದ್ರ ಜಲ ಆಯೋಗವೇ ಹಿಂದೆ ಷರತ್ತು ವಿಧಿಸಿತ್ತು. ಕಾವೇರಿ ನದಿ ಮೇಲ್ವಿಚಾರಣಾ ಸಮಿತಿ ಈಗಾಗಲೇ ಹಲವಾರು ಸಭೆ ನಡೆಸಿದ್ದು, ಅಂತಿಮ ಜೂನ್ 16 ರಂದು ಅಂತಿಮ ಸಭೆ ನಡೆಯಲಿದೆ. ಕಾವೇರಿ ವಿಷಯದ ಮೇಲೆ ಈ ರೀತಿ ಹಲವಾರು ವರ್ಷಗಳಿಂದ ತಮಿಳುನಾಡು ಮಾಡಿದ್ದಾರೆ. ಇದು ಅದರ ಭಾಗವಷ್ಟೇ. ಇದು ಕಾನೂನಿನ ಚೌಕಟ್ಟಿನಲ್ಲಿ ನಿಲ್ಲುವುದೂ ಇಲ್ಲ. ಕಾನೂನು ಬಾಹಿರ ಪತ್ರವನ್ನು ಕೇಂದ್ರ ಖಂಡಿತವಾಗಿಯೂ ಪರಿಗಣಿಸುವುದಿಲ್ಲ. ನ್ಯಾಯ ಸಿಗುವ ಬಗ್ಗೆ ನಮಗೆ ವಿಶ್ವಾಸವಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಜೂನ್ 16 ರಂದು ತಮಿಳುನಾಡು, ಪಾಂಡಿಚೇರಿ, ಕರ್ನಾಟಕ ಹಾಗೂ ಕೇರಳ ರಾಜ್ಯಗಳು ಹಾಗೂ ಕೇಂದ್ರ ಸರ್ಕಾರದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸುತ್ತಾರೆ ಎಂದರು.

ಬೆಳಗಾವಿ ಬಳಿ ತಲ್ವಾರ್ ತೋರಿಸಿ ವ್ಯಕ್ತಿಯಿಂದ ಚಿನ್ನಾಭರಣ ಸುಲಿಗೆ; ಬೆಚ್ಚಿ ಬೀಳಿಸಿದ ಘಟನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button