ಪ್ರಗತಿವಾಹಿನಿ ಸುದ್ದಿ, ಬೀಳಗಿ: ಪ್ರಧಾನಮಂತ್ರಿ ಕೃಷಿ ಸಮ್ಮಾನ ಯೋಜನೆ ಮೂಲಕ ೬ ಸಾವಿರ ರೂ ಕೇಂದ್ರ ಸರ್ಕಾರ ನೀಡಿದರೆ ರಾಜ್ಯ ಸರ್ಕಾರ ೪ ಸಾವಿರ ರೂ ನೀಡಿ ವಾರ್ಷಿಕ ೧೦ ಸಾವಿರ ರೂ ನೀಡುವ ಮೂಲಕ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲ ಮಾಡುವ ಜೊತೆಗೆ ರೈತ ವಿದ್ಯಾನಿಧಿ ಮೂಲಕ ರೈತರ ಮಕ್ಕಳ ಶಿಕ್ಷಣಕ್ಕೆ ಜೊತೆಯಾಗಿ ನಿಂತಿದ್ದು ನಮ್ಮ ಬಿಜೆಪಿ ಸರ್ಕಾರ ಎಂದು ವಿ.ಪ.ಸದಸ್ಯ ಪಿ. ಎಚ್. ಪೂಜಾರ ಹೇಳಿದರು.
ಗೋವಿನಕೊಪ್ಪ, ಕಲಾದಗಿ ಗ್ರಾಮದಲ್ಲಿ ಬೀಳಗಿ ಬಿಜೆಪಿ ಅಭ್ಯರ್ಥಿ ಮುರುಗೇಶ ನಿರಾಣಿ ಪರವಾಗಿ ಮತಯಾಚನೆ ಮಾಡಿ ಮಾತನಾಡಿದರು. ತುಳಸಿಗೇರಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು ರೈತರು, ಕೃಷಿ ಕಾರ್ಮಿಕರು, ನೇಕಾರರು, ಮೀನುಗಾರರು, ಎಲ್ಲ ವರ್ಗದ ಕೂಲಿ ಕಾರ್ಮಿಕರ ಕಲ್ಯಾಣಕ್ಕೆ ಬಿಜೆಪಿ ಬದ್ಧವಾಗಿ ಕಾರ್ಯನಿರ್ವಹಿಸಿದೆ. ೨೦ ವರ್ಷಗಳಲ್ಲಿ ೩ ಬಾರಿ ಶಾಸಕರಾಗಿ, ೨ ಅವಧಿಗೆ ಸಚಿವರಾಗಿ ಮುರುಗೇಶ ನಿರಾಣಿ ಬೀಳಗಿ ಮತಕ್ಷೇತ್ರ ಹಾಗೂ ಕರ್ನಾಟಕದ ಜನತೆಯ ಸೇವೆ ಮಾಡಿದ್ದಾರೆ. ಅವರ ಅವಧಿಯಲ್ಲಿ ಬೀಳಗಿಯಲ್ಲಿ ನೀರಾವರಿ, ಶಿಕ್ಷಣ, ರಸ್ತೆ ಮೂಲಭೂತ ಸೌಕರ್ಯ ಎಲ್ಲ ರಂಗಗಳಲ್ಲೂ ಅಭಿವೃದ್ದಿಯಾಗಿದೆ. ಬೀಳಗಿ ಜನತೆಯ ಬಗ್ಗೆ ವಿಶೇಷ ಅಂತಃಕರಣ ಇರುವ ಮುರುಗೇಶ ನಿರಾಣಿ ಯವರನ್ನು ಮತ್ತೊಮ್ಮೆ ದಾಖಲೆಯ ಮತಗಳಿಂದ ಗೆಲ್ಲಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ಮುರುಗೇಶ ನಿರಾಣಿ, ಕಳೆದ ೫ ವರ್ಷಗಳಲ್ಲಿ ಮಾಡಿದ ಜನಸೇವೆಗೆ ಪ್ರತಿಫಲವಾಗಿ ಹೋದಲೆಲ್ಲ ನಮಗೆ ಅಭೂತಪೂರ್ವ ಬೆಂಬಲ ದೊರಕುತ್ತಿದೆ. ಜನತೆಯ ಆಶಯ-ಆಶೋತ್ತರಗಳಿಗೆ ಸ್ಪಂದಿಸಿ ಕೆಲಸ ಮಾಡಿದ್ದೇನೆ. ೩ ಬಾರಿ ಆಶಿರ್ವಾದ ಮಾಡಿದ್ದೀರಿ. ಈ ಬಾರಿಯೂ ನಿಮ್ಮ ಬೆಂಬಲ ಆಶಿರ್ವಾದ ಇರಲಿ ಎಂದು ಮತದಾರರಲ್ಲಿ ವಿನಂತಿಸಿಕೊಂಡರು. ಕಾಂಗ್ರೆಸ್ ಜಾತಿ -ಜಾತಿಗಳಲ್ಲಿ ಜಗಳ ಹಚ್ಚುವ ಮೂಲಕ ಒಡೆದು ಆಳುವ ನೀತಿ ಅನುಸರಿಸುತ್ತದೆ. ಬೀಳಗಿ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ದು ಈ ಬಾರಿ ಖೇಲ್ ಕತಂ ನಾಟಕ ಬಂದ್ ಆಗಲಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ವೆಂಕಟೇಶ ದಾಸನ್ನವರ, ವಿಠ್ಠಲ ಸೊನ್ನದ, ಶ್ರೀನಿವಾಸ ಪೂಜಾರ, ಸುರೇಶ ಮಾದರ, ಮಂಜುಗೌಡ ಪಿ. ಪಾಟೀಲ, ಶಿವಪುತ್ರಪ್ಪ ದಾಸನ್ನವರ, ಉದಂಡಪ್ಪ ತಪರೇಶ ಹಾಗೂ ಹಲವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ