ಪ್ರಗತಿ ವಾಹಿನಿ ಸುದ್ದಿ, ವಿಜಯಪುರ: ನಡೆದಾಡುವ ದೇವರೆಂದೇ ಪ್ರಸಿದ್ಧರಾಗಿರುವ ವಿಜಯಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಶುಕ್ರವಾರ ಸಾವಿರಾರು ಭಕ್ತರಿಗೆ ದರ್ಶನ ನೀಡಿದ್ದಾರೆ.
ಅನಾರೋಗ್ಯದ ನಿಮಿತ್ತ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಜ್ಞಾನ ಯೋಗಾಶ್ರಮದಲ್ಲೇ ಚಿಕಿತ್ಸೆ ಪಡೆಯುತ್ತಿರುವ ಕಾರಣ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿ ನಿತ್ಯ ಸಾವಿರಾರು ಜನ ಅವರ ದರ್ಶನಕ್ಕಾಗಿ ಆಶ್ರಮಕ್ಕೆ ಬರುತ್ತಿದ್ದಾರೆ.
ಅವರು ಶುಕ್ರವಾರ (ಡಿ.30) ವೀಲ್ ಚೇರ್‍ನಲ್ಲೇ ಕುಳಿತು ಆಶ್ರಮದ ಮೊದಲ ಮಹಡಿಯ ಮೂಲಕ ಸಾವಿರಾರು ಭಕ್ತರಿಗೆ ದರ್ಶನ ನೀಡಿದರು. ಬಿಸಿಲಿರುವ ಕಾರಣ ಭಕ್ತರಿಗಾಗಿ ಟೆಂಟ್ ನಿರ್ಮಿಸಲಾಗಿದೆ.
ಇದೇ ವೇಳೆ ವೈದ್ಯರ ಸೂಚನೆಯ ಮೇರೆಗೆ ಶನಿವಾರದಿಂದ ದರ್ಶನ ನಿಲ್ಲಿಸಲಾಗುತ್ತಿದ್ದು ಭಕ್ತರು ಆಗಮಿಸಬಾರದು ಎಂದು ಕಿರಿಯ ಸ್ವಾಮೀಜಿ ಘೋಷಣೆ ಮಾಡಿದರು.
ಮುರುಗೇಶ ನಿರಾಣಿ ಭೇಟಿ
ಸಚಿವ ಮುರುಗೇಶ ನಿರಾಣಿ ಅವರು ಆಶ್ರಮಕ್ಕೆ ಬಂದು ಶ್ರೀ ಸಿದ್ದೇಶ್ವರ ಸ್ವಾಮಿಗಳ ಆರೋಗ್ಯ ವಿಚಾರಿಸಿದರು. ಬಳಿಕ ಮಾತನಾಡಿದ ಅವರು, ದೇವರ ಸ್ವರೂಪರಾದ ಸಿದ್ದೇಶ್ವರ ಸ್ವಾಮಿಗಳು ಅನಾರೋಗ್ಯಗೊಂಡಿದ್ದು ನೋವು ತಂದಿದೆ. ಅವರನ್ನು ಹೋಲಿಕೆ ಮಾಡಬಲ್ಲ ಮತ್ತೊಬ್ಬರು ಜಗತ್ತನಲ್ಲಿ ಇಲ್ಲ. ವೈಭವೋಪೇತ ಜೀವನ ಬಯಸಿದವರಲ್ಲ. ನಮ್ಮ ಕುಟುಂಬಕ್ಕೂ ಆತ್ಮೀಯರಾಗಿದ್ದಾರೆ. ಅವರು ಬೇಗನೆ ಚೇತರಿಸಿಕೊಳ್ಳಲಿ ಎಂದರು. ಭಕ್ತರು, ಅಭಿಮಾನಿಗಳು ಆತಂಕಪಡಬಾರದು ಎಂದರು.
*9 ದಿನಗಳಲ್ಲಿ 41.20 ಗಂಟೆ ಕಲಾಪ; 9 ಶಾಸಕರು ಅನುಮತಿ ಪಡೆಯದೆ ಗೈರು: ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ*
https://pragati.taskdun.com/belagaviwinter-sessionspeaker-vishweshwar-hegade-kageripressmeet/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ