ಉದ್ಯೋಗ ಕೊಡಿಸುವುದಾಗಿ ಆಮಿಷ
ಪ್ರಗತಿವಾಹಿನಿ ಸುದ್ದಿ, ಶಿರಸಿ – ಉಪನ್ಯಾಸಕ ಹುದ್ದೆ ಕೊಡಿಸುವುದಾಗಿ ನಂಬಿಸಿ ಹನಿಟ್ರ್ಯಾಪ್ ಮಾಡಿ ಹಣ ಕೀಳಲು ಯತ್ನಿಸಿದ್ದ ಓರ್ವ ಮಹಿಳೆ ಸೇರಿದಂತೆ ಮೂವರನ್ನು ಶಿರಸಿ ಪೊಲೀಸರು ಹೆಡೆಮುರಿಕಟ್ಟಿದ್ದಾರೆ.
ಉಂಚಳ್ಳಿಯ ಅಜಿತ್ ಶ್ರೀಕಾಂತ ನಾಡಿಗ (೨೫) ಬನವಾಸಿಯ ಧನುಶ್ ಕುಮಾರ (೨೫) ಹಾಗೂ ಶಿವಮೊಗ್ಗದ ಪದ್ಮಜಾ ಡಿ. ಎನ್. (೫೦) ಬಂಧಿತ ಆರೋಪಿಗಳು.
ಉದ್ಯೋಗದ ನಿರೀಕ್ಷೆಯಲ್ಲಿದ್ದ ಶಿರಸಿ ಮೂಲದ ವ್ಯಕ್ತಿಯೊಬ್ಬನಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಶಿವಮೊಗ್ಗದ ಲಾಡ್ಜ್ ಒಂದಕ್ಕೆ ಬರುವಂತೆ ಆರೋಪಿಗಳು ಹೇಳಿದ್ದರು. ಅದರಂತೆ ಶಿವಮೊಗ್ಗದ ಲಾಡ್ಜ್‌ಗೆ ಬಂದ ಉದ್ಯೋಗಾಂಕ್ಷಿಯನ್ನು ಬಲವಂತವಾಗಿ ಬೆತ್ತಲೆಗೊಳಿಸಿ ಅಲ್ಲಿದ್ದ ಮಹಿಳೆಯ ಜೊತೆ ಅಶ್ಲೀಲ ಫೋಟೊಗಳನ್ನು ತೆಗೆಯಲಾಗಿದೆ. ಬಳಿಕ ಹಣಕ್ಕಾಗಿ ಪೀಡಿಸಲಾಗಿತ್ತು.
ಅಲ್ಲದೇ ವ್ಯಕ್ತಿಯ ತಂದೆಯ ಬಳಿಯೂ ಹೋಗಿ, ನಿಮ್ಮ ಮಗ ಮಹಿಳೆಯೊಂದಿಗೆ ಇರುವ ಅಶ್ಲೀಲ ಫೋಟೊಗಳು ಇದ್ದು, ೧೫ ಲಕ್ಷ ಹಣ ನೀಡುವಂತೆ ಬೆದರಿಸಿದ್ದರು. ಅಲ್ಲದೇ ಬಲವಂತವಾಗಿ ಚೆಕ್ ಬರೆಸಿಕೊಂಡಿದ್ದರು.
ಇದರಿಂದ ಕಂಗಾಲದ ವ್ಯಕ್ತಿಯ ಕುಟುಂಬದವರು ಶಿರಸಿ ಹೊಸ ಮಾರುಕಟ್ಟೆ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಗುರುವಾರ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಒಂದೇ ಗ್ರಾಮದ ಪುರುಷ, ಮಹಿಳೆ ನಾಪತ್ತೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ