Belagavi NewsBelgaum NewsKannada NewsKarnataka News

*ವಿದ್ಯುತ್ ಸ್ಪರ್ಶಿಸಿ ಮೂರು ಎಮ್ಮೆ, ಒಂದು ಕುದುರೆ ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಭಾರಿ ಮಳೆ ಗಾಳಿಗೆ ವಿದ್ಯುತ್ ತಂತಿ ತಗುಲಿ ಮೂರು ಎಮ್ಮೆ, ಹಾಗೂ ಒಂದು ಕುದರೆ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅರಳಿಮಟ್ಟಿ ಗ್ರಾಮದಲ್ಲಿ ಈ ಅವಘಟ ಸಂಭವಿಸಿದೆ. ಗ್ರಾಮದ ಶಂಕರ ಸಮಗಾರ ಎಂಬುವವರಿಗೆ ಸೇರಿದ ಎಮ್ಮೆಗಳು ಹಾಗೂ ಕುದುರೆಯನ್ನು ಶೆಡ್ ನಲ್ಲಿ ಕಟ್ಟಲಾಗಿತ್ತು. ಜೋರಾಗಿ ಬಿಸಿದ ಗಾಳಿಗೆ ವಿದ್ಯುತ್ ತಂತಿ ತುಂಡಾಗಿ ದನಗಳ ಮೇಲೆ ಬಿದ್ದಿದೆ. 

ಈ ವೇಳೆ ಮೂರು ಎಮ್ಮೆ, ಒಂದು ಕುದುರೆ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿವೆ. ಕುಟುಂಬಕ್ಕೆ ಆಸರೆಯಾಗಿದ್ದ ಎಮ್ಮೆಗಳನ್ನ ಕಳೆದುಕೊಂಡ ಕುಟುಂಬ ಕಣ್ಣೀರು ಹಾಕುವಂತಾಗಿದೆ. ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button