ಪ್ರಗತಿವಾಹಿನಿ ಸುದ್ದಿ: ಟ್ರ್ಯಾಕ್ಟರ್‌ಗೆ ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತುಮಕೂರು ತಾಲ್ಲೂಕಿನ ಓಬಳಾಪುರ ಗೇಟ್ ಬಳಿ ನಡೆದ ನಡೆದಿದೆ.
ಮಹಮದ್ ಆಸೀಫ್ (12), ಮಮ್ರಾಜ್ (38) ಶಾಖೀರ್ ಹುಸೇನ್ (48) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಕೊರಟಗೆರೆ ರಸ್ತೆಯ ಓಬಳಾಪುರ ಗೇಟ್ ಬಳಿ ಇವತ್ತು ಬೆಳಗ್ಗೆ 6: 30ರ ಸಂದರ್ಭದಲ್ಲಿ ಅನಾಹುತ ಸಂಭವಿಸಿದೆ. ಮೃತರು, ಮಧುಗಿರಿ ತಾಲ್ಲೂಕಿನ ಪುರವರ ಹೋಬಳಿಯ ಗುಡ್ಡಹಳ್ಳಿ ಮೂಲದವರು ಎನ್ನಲಾಗಿದೆ.ಸ್ಥಳಕ್ಕೆ ಎಸ್ಪಿ ಅಶೋಕ್, ಡಿವೈಎಸ್‌ಪಿ ಚಂದ್ರಶೇಖರ್ ಹಾಗೂ ಗ್ರಾಮಾಂತರ ಇನ್ಸ್‌ಪೆಕ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ