Kannada NewsKarnataka News

1.21 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗೆ ಚಾಲನೆ

​ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಂಗ್ರಾಳಿ ಬಿ ಕೆ ಗ್ರಾಮದ ಚವಾಟ ಗಲ್ಲಿಯ ಚರಂಡಿಗಳ ನಿರ್ಮಾಣಕ್ಕಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಲೋಕೋಪಯೋಗಿ ಇಲಾಖೆಯ ವತಿಯಿಂದ 1.21 ಕೋಟಿ ರೂ, ಮಂಜೂರು ಮಾಡಿಸಿದ್ದು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಸೋಮವಾರ ಕಾಮಗಾರಿಗಳಿಗೆ ಚಾಲನೆಯನ್ನು ನೀಡಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಳ್ಳಿ ಹಳ್ಳಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಾಗಿದ್ದು, ಇತಿಹಾಸದಲ್ಲೇ ಎಂದೂ ಇಷ್ಟೊಂದು ಅಭಿವೃದ್ಧಿ ಕಂಡಿರಲಿಲ್ಲ. ಹಾಗಾಗಿ ಮುಂದಿನ ಬಾರಿಯೂ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಬೆೆಂಬಲಿಸಬೇಕು ಎಂದು ಮೃಣಾಲ ಹೆಬ್ಬಾಳಕರ್ ಈ ಸಂದರ್ಭದಲ್ಲಿ ಹೇಳಿದರು. 

ಈ ಸಮಯದಲ್ಲಿ ದತ್ತಾ ಪಾಟೀಲ, ಅರ್ಚನಾ ಪಾಟೀಲ, ಸದೆಪ್ಪ ರಾಜಕಟ್ಟಿ, ಜಯರಾಂ ಪಾಟೀಲ, ಶಂಕರ ಅಷ್ಟೇಕರ್, ಉಮೇಶ ಪಾಟೀಲ, ವಿಶಾಲ ಪಾಟೀಲ, ನಾರಾಯಣ ಪಾಟೀಲ, ಮಾರುತಿ ಚೌಹಾನ್ ಮುಂತಾದವರು ಉಪಸ್ಥಿತರಿದ್ದರು.

Home add -Advt
https://pragati.taskdun.com/road-development-at-cost-85-lakhs-rs-channaraja-hattiholi-who-drove-it/

Related Articles

Back to top button