Kannada NewsKarnataka NewsLatest

ಚಿತ್ರದುರ್ಗ ಬಳಿ ಭೀಕರ ಅಪಘಾತಕ್ಕೆ ಬೆಳಗಾವಿಯ ಮೂವರು ಬಲಿ

ಪ್ರಗತಿವಾಹಿನಿ ಸುದ್ದಿ, ಚಿತ್ರದುರ್ಗ – ಚಿತ್ರದುರ್ಗದ ಹಿರಿಯೂರು ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬೆಳಗಾವಿಯ ಮೂವರ ಸಾವಿಗೀಡಾಗಿದ್ದಾರೆ.

ಟೋಲ್ ನಾಕಾದಲ್ಲಿ ನಿಂತಿದ್ದ ಗ್ಯಾಸ್ ಟ್ಯಾಂಕರ್ ಗೆ ಕಾರು (ಕೆಎ22, ಪಿ0362) ಹಿಂದಿನಿಂದ ಬಂದು ಗುದ್ದಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಒಳಗಿದ್ದ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ರಮೇಶ ಶಾನಭಾಗ (67), ಅವರ ಪತ್ನಿ ಸೀಮಾ ಶಾನಭಾಗ (62) ಹಾಗೂ ಹಿರಿಯ ಸಹೋದರ ವಿಶ್ವನಾಥ ಶಾನಭಾಗ (72) ಸಾವಿಗೀಡಾದವರು. ಇವರೆಲ್ಲ ಬೆಳಗಾವಿ ಸುಭಾಷ ನಗರದವರು.

Home add -Advt

ಇವರೆಲ್ಲ ಮೂಲತಃ ಹೊನ್ನಾವರ ತಾಲೂಕಿನವರು.

ಗುರುವಾರ ಬೆಳಗ್ಗೆ ಬೆಳಗಾವಿಯಿಂದ ಬೆಂಗಳೂರಿನಲ್ಲಿರುವ ಸಹೋದರಿಯ ಮನೆಗೆ ಹೊರಟಿದ್ದರು. ಟೋಲ್ ನಾಕಾ ಬಳಿ ಕಾರನ್ನು ನಿಧಾನವಾಗಿಸುವ ಬದಲು ಒಮ್ಮೆಲೆ ವೇಗವಾಗಿಸಿದ್ದೇ ಅವಘಡಕ್ಕೆ ಕಾರಣ. ಬ್ರೇಕ್ ಒತ್ತುವ ಬದಲು ಎಕ್ಸಲೇಟರ್ ಒತ್ತಿರುವ ಸಾಧ್ಯತೆ ಇದೆ.

ಕ್ರೋನ್ ಸಹಾಯದಿಂದ ಟೋಲ್ ನಾಕಾ ಸಿಬ್ಬಂದಿ ಮತ್ತು ಸ್ಥಳೀಯರು ಟ್ಯಾಂಕರ್ – ಕಾರ್ ಬೇರ್ಪಡಿಸಿದ್ದಾರೆ. ನಂತರ ಅದರಲ್ಲಿದ್ದ ಮೂವರ ಮೃತದೇಹಗಳನ್ನು ಹೊರತೆಗೆಯಲಾಗಿದೆ.

ಬೆಳಗಾವಿಯಲ್ಲಿ ನಿಲ್ಲದ ಕೊರೋನಾ ಅಟ್ಟಹಾಸ: ಗುರುವಾರ 3ನೇ ಅಲೆಯ ಹೊಸ ದಾಖಲೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button