Kannada NewsKarnataka News
ನಿಪ್ಪಾಣಿ ಕೊಲೆ ಪ್ರಕರಣ ಮೂರೇ ದಿನದಲ್ಲಿ ಬಯಲು: ಐವರು ಕೊಲೆಗಾರರಲ್ಲಿ ಮೂವರು ಅಪ್ರಾಪ್ತರು!
ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ – ನಿಪ್ಪಾಣಿಯಲ್ಲಿ ಏಪ್ರಿಲ್ 4ರಂದು ನಡೆದಿದ್ದ ಯುವಕನ ಕೊಲೆ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದು, ಆ ಸಂಬಂಧ ಐವರನ್ನು ಬಂಧಿಸಿದ್ದಾರೆ. ಐವರಲ್ಲಿ ಮೂವರು ಅಪ್ರಾಪ್ತರಾಗಿದ್ದು, ಅವರನ್ನು ಬಾಲ ನ್ಯಾಯಮಂಡಳಿ ಮುಂದೆ ಹಾಜರುಪಡಿಸಲಾಗಿದ್ದು, ಉಲಿದಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಎಸ್ಪಿ ಲಕ್ಷ್ಮಣ ನಿಂಬರಗಿ ಹಾಗೂ ಹೆಚ್ಚುವರಿ ಎಸ್ಪಿ ಮಹಾನಿಂಗ ನಂದಗಾವಿ, ಚಿಕ್ಕೋಡಿ ಡಿಎಸ್ಪಿ ಬಸವರಾಜ ಯಲಗಾರ ಮಾರ್ಗದರ್ಶನದಲ್ಲಿ ನಿಪ್ಪಾಣಿ ಸಿಪಿಐ ಸಂಗಮೇಶ ಶಿವಯೋಗಿ , ಪಿಎಸ್ಐ ಕೃಷ್ಣವೇಣಿ ಸಿ.ಜೆ. ಹಾಗೂ ಅವರ ತನಿಖಾ ತಂಡ ಪ್ರಕರಣವನ್ನು ಭೇದಿಸಿದೆ.
ಅಭಿಷೇಕ ಶಿವಾನಂದ ದತ್ತವಾಡ (ವಯಸ್ಸು:21 ವರ್ಷ ಸಾ:ಸೈನಿಕ ಬಾಕಳ ತಾ:ಶಿರೋಳ ಜಿ:ಕೊಲ್ಲಾಪೂರ ಈಗ ಸಧ್ಯ ನಿಪ್ಪಾಣಿ, ಮಾನವಿ ಗಲ್ಲಿ ತಾ:ನಿಪ್ಪಾಣಿ ಜಿ:ಬೆಳಗಾವಿ) ಎನ್ನುವಾತನನ್ನು ಕೊಲೆಗೈಯ್ಯಲಾಗಿತ್ತು. (ಈ ಸುದ್ದಿ ಓದಿ – ಬೆಳಗಾವಿ: ಮತ್ತೊಬ್ಬ ಯುವಕನ ಭೀಕರ ಕೊಲೆ )
ಕೊಲೆಯ ಪ್ರಕರಣವನ್ನು ಕೇವಲ 3 ದಿನಗಳಲ್ಲಿ ಭೇದಿಸಿ ಕಾನೂನು ಸಂಘರ್ಷಕ್ಕೊಳಗಾದ ಮೂವರು ಅಪ್ರಾಪ್ತರನ್ನು ವಶಕ್ೆ ಪಡೆಯಲಾಗಿದೆ. ಜೊತೆಗೆ, ಅಮನ ಹಸನ ಎಣ್ಣೆಂಬೆ (ವಯಸ್ಸು:22 ವರ್ಷ ಜಾತಿ:ಮುಸ್ಲಿಂ ಉದ್ಯೋಗ:ಕೂಲಿ ಕೆಲಸ ಸಾ:ಚಿತ್ತಾಟ ತಾ:ನಿಪ್ಪಾಣಿ) ಮತ್ತು ಸೈಪ್‌ಅಲಿ ಶೇರಲ ನಗಾರಜಿ (ವಯಸ್ಸು:22 ವರ್ಷ ಜಾತಿ:ಮುಸ್ಲಿಂ ಉದ್ಯೋಗ:ಕೂಲ ಕೆಲಸ ಸಾ:ವಿಧ್ಯಾರ್ಥಿ ಸಾದರ್ಗಾಗಲ್ಲಿ ಹಾಲಿ ಮೇಸ್ತ್ರಿ ಗಲ್ಲ ನಿಪ್ಪಾಣಿ ತಾ:ನಿಪ್ಪಾಣಿ) ಇವರನ್ನು ಬಂಧಿಸಲಾಗಿದೆ.
ಅಪ್ರಾಪ್ತ ಬಾಲಕರಿಗೆ ಹಾಗೂ ಆರೋಪಿ ಅ.ನಂ.4 ಅಮನ ಎಕ್ಸಂಬೆ ಒಂದು ತಿಂಗಳ ಹಿಂದೆ ಅಭಿಷೇಕ ತಂಟೆ ತೆಗೆದು ಅವರಿಗೆ ಹೊಡೆದಿದ್ದರಿಂದ ಅದರ ಸಿಟ್ಟು ಹಿಡಿದುಕೊಂಡು, ವೈಮನಸ್ಸು ತಾಳಿ ಕಾನೂನು ಸಂಘರ್ಷಕ್ಕೊಳಗಾದ ಬಾಲಕರು & ಆರೋಪಿತರು ಮೃತ ಅಭಿಷೇಕ ದತ್ತವಾಡೆ ಇವನ ಕೊಲೆ ಮಾಡುವ ಸಂಚು ರೂಪಿಸಿ ದಿನಾಂಕ:04/04/2022 ರಂದು 0110 ಗಂಟೆಗೆ ಮೃತನು ವಾಸವಾಗಿರುವ ಅಪಾರ್ಟಮೆಂಟಗೆ ಹೋಗಿ ಅವನು ಮೆಟ್ಟಲುಗಳನ್ನು ಏರಿ ತಮ್ಮ ಮನೆಗೆ ಹೋಗುವಾಗ ಸ್ಟೀಲ್ ರಾಡ್ & ಚಾಕುಗಳಿಂದ ಹೊಡೆದು ಅವನ ತಲೆಗೆ, ಕುತ್ತಿಗೆಗೆ, ಬೆನ್ನಿಗೆ, ಹೊಟ್ಟೆಗೆ, ಎದೆಗೆ ಭಾರಿ ಗಾಯ ಪಡಿಸಿದ್ದರು.
ಆತ ಸ್ಥಳದಲ್ಲಿಯೇ ಮೃತನಾಗಿದ್ದ. ಆರೋಪಿಗಳು ನಿಪ್ಪಾಣಿಯಿಂದ ತಲೆಮರೆಯಿಸಿಕೊಂಡು ಕಾಕತಿಗೆ ಹೋಗಿ ಅಲ್ಲಿ ತಮ್ಮ ಮೈಮೇಲಿದ್ದ ರಕ್ತ ಹತ್ತಿದ ಬಟ್ಟೆಗಳನ್ನು ಸುಟ್ಟು ನಾಶ ಪಡಿಸಿದ್ದರು. ಕಾನೂನು ಸಂಘರ್ಷಕ್ಕೊಳಗಾದ ಅಪ್ರಾಪ್ತ ಬಾಲಕರನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಗೂ ಎ-4 & ಎ-5 ಇವರನ್ನು ಮಾನ್ಯ ಜೆಎಮ್‌ಎಫ್‌ಸಿ ನಿಪ್ಪಾಣಿರವರ ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ