Belagavi NewsBelgaum NewsKannada NewsLatest

*ಬೆಳಗಾವಿಯ ಆರ್‌ಟಿಓ ಸರ್ಕಲ್ ಬಳಿ ಆಟೋ ಮೇಲೆ ಬಿದ್ದ ಮರ*

​ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಆರ್ ಟಿ ಓ ವೃತ್ತದ ಬಳಿ ಭಾರಿ ಗಾತ್ರದ ನೀಲಗಿರಿ ಮರವೊಂದು ರಸ್ತೆಯ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಆಟೋ ಮೇಲೆ ಧರೆಗುರುಳಿದ ಘಟನೆ ನಡೆದಿದೆ.

ಆಟೋ ಮೇಲೆ ಮರ ಬಿದಿದ್ದರಿಂದ ಆಟೋ ಸಂಪೂರ್ಣವಾಗಿ ಜಖಂಗೊಂಡಿದೆ. ​ಭಾರಿ ಗಾತ್ರದ ಮರ ಮತ್ತು ಅದರ ಕೊಂಬೆಗಳು ರಸ್ತೆಗೆ ಅಡ್ಡಲಾಗಿ ಬಿದ್ದಿರುವುದರಿಂದ ಈ ಭಾಗದಲ್ಲಿ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿದ ಬಗ್ಗೆ ಸದ್ಯಕ್ಕೆ ವರದಿಯಾಗಿಲ್ಲ.

ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿದ್ದು, ಮರವನ್ನು ತೆರವುಗೊಳಿಸಲು ತೆರವುಗೋಳಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button