Belagavi NewsBelgaum NewsEducation

*JEE ಮುಖ್ಯ ಪರೀಕ್ಷೆ: ಬೆಳಗಾವಿ ಜೈನ ಕಾಲೇಜಿನ ಮೂವರು ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ*

ಪ್ರಗತಿವಾಹಿನಿ ಸುದ್ದಿ: ಇತ್ತೀಚೆಗೆ ಜರುಗಿದ  ಪ್ರಸಕ್ತ ಸಾಲಿನ ಜೆಇಇ ಮುಖ್ಯ ಪರೀಕ್ಷೆಯಲ್ಲಿ   ಬೆಳಗಾವಿಯ ಜೈನ ಶಿಕ್ಷಣ ಸಮೂಹ ಸಂಸ್ಥೆಯ ( ಜೆಜಿಐ)ಯ ಪದವಿ ಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯ ಅಂಕಗಳನ್ನು ಪಡೆದು ಸಾಧನೆ ಮೆರೆದಿದ್ದಾರೆ.

ಆದಿತ್ಯ ಶಿಂಗನಮಕ್ಕೆ ಶೇಕಡಾ 99.45 ಅಂಕ ಪಡೆದರೆ, ಶೇ 95.60 ಅಮೈ ಸತೀಶ್ ಅಂಗಡಿ ಹಾಗೂ ಶೇ. 95.25  ರೋನಕ ವಿಕಾಸ ಮೇಹ್ತಾ ಅಂಕ ಪಡೆದು ಅತ್ಯುನ್ನತ ಶ್ರೇಣಿ ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿಗಳ ಮಹತ್ತರ ಸಾಧನೆಗೆ ಹರ್ಷ ವ್ಯಕ್ತಪಡಿಸಿರುವ ಜೆಜಿಐ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಸಿಬ್ಬಂದಿ ಅಭಿನಂದಿಸಿ, ಮುಂದಿನ ಅಧ್ಯಯನಕ್ಕೆ ಶುಭ ಕೋರಿದ್ದಾರೆ.

Home add -Advt

Related Articles

Back to top button