
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಶ್ವ ಥೈರಾಯ್ಡ ದಿನಾಚರಣೆ ಅಂಗವಾಗಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಎಂಡೋಕ್ರಿನಾಲಜಿ ವಿಭಾಗವು ಉಚಿತ ಥೈರಾಯ್ಡ ತಪಾಸಣಾ ಶಿಬಿರವನ್ನು ದಿ. 25 ಮೇ 2023ರಂದು ಬೆಳಗ್ಗೆ 10 ರಿಂದ 1 ಗಂಟೆಯವರೆಗೆ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದೆ.
ತಿಂಗಳ ಋತುಚಕ್ರದಲ್ಲಿ ಏರುಪೇರು, ಮಕ್ಕಳಲ್ಲಿ ಬೆಳವಣಿಗೆ ಇಲ್ಲದಿರುವದು, ದೇಹ ತೂಕದಲ್ಲಿ ವಿಪರೀತ ಹೆಚ್ಚಳ, ಜೀರ್ಣಕ್ರಿಯೆಯಲ್ಲಿ ತೊಂದರೆ, ಅಶಕ್ತತೆ, ತೀವ್ರತರವಾದ ಚಳಿ, ಕೂದಲು ಉದುರುವದು ಹಾಗೂ ಅತಿಯಾದ ನಿದ್ದೆ ಸೇರಿದಂತೆ ಥೈರಾಯ್ಡಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಂದ ಬಳಲುತ್ತಿರುವವರು ಈ ಶಿಬಿರದಲ್ಲಿ ಪಾಲ್ಗೊಂಡು ತಪಾಸಿಸಿಕೊಳ್ಳುವಂತೆ ಕೋರಲಾಗಿದೆ.
ಡಾ. ವಿಕ್ರಾಂತ ಘಟನಟ್ಟಿ, ಡಾ. ಮಂಜುನಾಥ ಗೊರೊಶಿ ಹಾಗೂ ಡಾ. ವಾನಿಶ್ರೀ (ಎಂಡೊಕ್ರಿನಾಲಾಜಿಸ್ಟ) ಅವರು ರೋಗಿಗಳನ್ನು ಸಮಗ್ರವಾಗಿ ತಪಾಸಿಸಿ ಸೂಕ್ತ ಸಲಹೆ ನೀಡಲಿದ್ದಾರೆ. ಥೈರಾಯಿಡ (ಟಿಎಸ್‌ಹೆಚ್) ರಕ್ತ ತಪಾಸಣೆ ಮಾಡಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಆಸ್ಪತ್ರೆಯ ಜನಸಂಪರ್ಕ ವಿಭಾಗ ಅಥವಾ ದೂರವಾಣಿ 0831-2473777,08312551116/1029 ಇಲ್ಲಿಗೆ ಸಂಪರ್ಕಿಸುವಂತೆ ಕೋರಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ