Film & EntertainmentKannada NewsKarnataka News

*ನಟ ಜಗ್ಗೇಶ್ ಬಳಿಯೂ ಇದೆಯಂತೆ ಹುಲಿ ಉಗುರಿನ ಲಾಕೆಟ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹುಲಿ ಉಗುರು ಧರಿಸಿದ್ದ ಕಾರಣಕ್ಕೆ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನ ಬೆನ್ನಲ್ಲೇ ಸಾಲು ಸಾಲು ಸೆಲೆಬ್ರಿಟಿಗಳಿಗೂ ಕಾನೂನು ಸಂಕಷ್ಟ ಎದುರಾಗಿದೆ. ಹುಲಿ ಉಗುರು ಧರಿಸಿರುವ ಆರೋಪದಲ್ಲಿ ನಟ ದರ್ಶನ್ ಹಾಗೂ ಹುಲಿ ಚರ್ಮದ ಮೇಲೆ ಕುಳಿತ ಆರೋಪದಲ್ಲಿ ವಿನಯ್ ಗುರೂಜಿ ವಿರುದ್ಧ ದೂರು ದಾಖಲಾಗಿದೆ. ಈ ಬೆಳವಣಿಗೆ ನಡುವೆಯೇ ಸ್ಯಾಂಡಲ್ ವುಡ್ ಹಿರಿಯ ನಟ, ನವರಸನಾಯಕ ಜಗ್ಗೇಶ್ ಬಳಿಯೂ ಹುಲಿ ಉಗುರು ಇರುವುದು ಗೊತ್ತಾಗಿದೆ.

ಜಗ್ಗೇಶ್ ಕತ್ತಲ್ಲಿಯೂ ಹುಲಿ ಉಗುರು ಇದೆ ಎಂಬ ಬಗ್ಗೆ ಖಾಸಗಿ ಚಾನಲ್ ಗೆ ನೀಡಿದ್ದ ಸಂದರ್ಶನದಲ್ಲಿ ನೀಡಿದ್ದ ಹೇಳಿಕೆಯ ಹಳೇ ವಿಡಿಯೋ ಈಗ ವೈರಲ್ ಆಗಿದೆ. ನನಗೆ 20 ವರ್ಷ ಇದ್ದಾಗ ಅಮ್ಮ ನನಗೆ ಈ ಲಾಕೆಟ್ ಕೊಡಿಸಿದ್ದರು. ಮಗ ಹುಲಿ ಇದ್ದಂಗೆ ಇರಬೇಕು ಅಂತಾ ಲಾಕೆಟ್ ಹಾಕಿದ್ದರು ಎಂದು ಹೇಳಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವರು ಈ ಬಗ್ಗೆ ಪ್ರಶ್ನಿಸಿದ್ದಾರೆ. ವರ್ತೂರು ಸಂತೋಷ್ ಬಂಧನ ಬೆನ್ನಲ್ಲೇ ಹುಲಿ ಉಗಿರು ಧರಿಸಿರುವವರ ಒಬ್ಬೊಬ್ಬರ ನಟರು, ದೊಡ್ಡ ದೊಡ್ಡ ವ್ಯಕ್ತಿಗಳ ಫೋಟೊಗಳು ವೈರಲ್ ಆಗುತ್ತಿವೆ.


Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button