ಗಣ್ಯಾತಿಗಣ್ಯರಿಗೆ ಆಶ್ರಯ ನೀಡಿದ್ದ ತಿಹಾರ್ ಜೈಲು
ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಇತಿಹಾಸ ಪ್ರಸಿದ್ಧ ತಿಹಾರ ಜೈಲು ಈಗ ಮತ್ತೆ ಸುದ್ದಿಯಲ್ಲಿದೆ. ಮಾಜಿ ಸಚಿವ ಡಿ.ಕೆ.ಶಿವಕುಮಾರ ಜೈಲು ಪಾಲಾಗುತ್ತಿದ್ದಂತೆ ತಿಹಾರ್ ಜೈಲು ದೊಡ್ಡಮಟ್ಟದ ಸುದ್ದಿಯಾಗುತ್ತಿದೆ.
ನವದೆಹಲಿಯಿಂದ ಸುಮಾರು 13 ಕಿಮೀ ದೂರದಲ್ಲಿರುವ ಜೈಲು ಇತಿಹಾಸ ಪ್ರಸಿದ್ಧವಾದುದು. ಹಲವಾರು ರಾಜಕಾರಣಿಗಳು, ಉದ್ಯಮಿಗಳು, ಕ್ರಿಮಿನಲ್ ಗಳು ತಿಹಾರ್ ಜೈಲು ಪಾಲಾಗಿದ್ದರು.
ಸಂಜಯ ಗಾಂಧಿ, ಜಾರ್ಜ್ ಫರ್ನಾಂಡೀಸ್, ಕನ್ನಿಮೋಳಿ, ಲಾಲೂಪ್ರಸಾದ ಯಾದವ, ಸುರೇಶ ಕಲ್ಮಾಡಿ, ಅಮರ್ ಸಿಂಗ್, ಅಣ್ಣಾಹಜಾರೆ, ಅರವಿಂದ ಕೇಜ್ರಿವಾಲ್, ಪಿ.ಚಿದಂಬರಮ್ ಸಹ ತಿಹಾರ್ ಜೈಲಿನಲ್ಲಿದ್ದರು.
ಕಾರ್ತಿ ಚಿದಂಬರಮ್, ಸುಬ್ರತಾ ರಾಯ್, ಅಭಿಷೇಕ ವರ್ಮಾ, ಮಕಭೂಲ್ ಭಟ್, ಚೋಟಾ ರಾಜನ್, ಚಾರ್ಲ್ಸ ಶೋಭರಾಜ್, ಅಥ್ಲೀಟ್ ಮಿಲ್ಕಾ ಸಿಂಗ್ ಮೊದಲಾದವರನ್ನು ಸಹ ತಿಹಾರ್ ಜೈಲಿನಲ್ಲಿಡಲಾಗಿತ್ತು.
ಪಶ್ಚಿಮ ದೆಹಲಿಯ ತಿಹಾರ್ ಎನ್ನುವ ಹಳ್ಳಿಯಲ್ಲಿ ಇರುವ ಈ ಜೈಲು ದಕ್ಷಿಣ ಏಷ್ಯಾದಲ್ಲಿಯೇ ದೊಡ್ಡ ಜೈಲೆನ್ನುವ ಖ್ಯಾತಿಯನ್ನು ಹೊಂದಿದೆ. ಜೈಲಿನ ಸಾಮರ್ಥ್ಯ 5200 ಕೈದಿಗಳಾಗಿದ್ದರೂ ಕೆಲವೊಮ್ಮೆ 12 ಸಾವಿರ ಕೈದಿಗಳವರೆಗೂ ತುಂಬಲಾಗಿತ್ತು. ಅತೀ ಹೆಚ್ಚು ಭದ್ರತಾ ವ್ಯವಸ್ಥೆ ಹೊಂದಿದ ಜೈಲು ಎನಿಸಿದರೂ 2015ರಲ್ಲಿ ಗೋಡೆ ಒಡೆದು ಇಬ್ಬರು ಕೈದಿಗಳು ಪರಾರಿಯಾಗಲು ಯಶಸ್ವಿಯಾಗಿದ್ದರು.
ಡಿ.ಕೆ.ಶಿವಕುಮಾರ ತಿಹಾರ್ ಜೈಲಿಗೆ ಸ್ಥಳಾಂತರ, ಇಂದು ಬಿಡುಗಡೆ ಕಷ್ಟ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ