ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಟಿಪ್ಪು ಸುಲ್ತಾನ್ ಕಾಲದಿಂದ ನಡೆದುಕೊಂಡು ಬಂದಿದ್ದ ದೀವಟಿಗೆ ಸಲಾಂ ಆರತಿ ಪೂಜೆಗೆ ರಾಜ್ಯ ಧಾರ್ಮಿಕ ಪರಿಷತ್ ಬ್ರೇಕ್ ಹಾಕಿದ್ದು, ದೇವಾಲಯಗಳಲ್ಲಿ ಸಲಾಂ ಆರತಿ ಪೂಜೆ ನಿಲ್ಲಿಸುವಂತೆ ಸುತ್ತೋಲೆ ಹೊರಡಿಸಿದೆ.
ಟಿಪ್ಪು ಆಡಳಿತ ಕಾಲದಿಂದಲೂ ರಾಜ್ಯದ ಪ್ರಸಿದ್ಧ ದೇವಾಲಯಗಳಾದ ಮಂಡ್ಯ ಜಿಲ್ಲೆಯ ಮೇಲುಕೋಟೆ ದೇವಾಲಯ, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು, ಪುತ್ತೂರಿನ ಮಹಾಲಿಂಗೇಶ್ವರ ಸೇರಿದಂತೆ ಹಲವು ದೇವಾಲಯಗಳಲ್ಲಿ ಸಂಧ್ಯಾಕಾಲದಲ್ಲಿ ದೀವಟಿಗೆ ಸಲಾಂ ಆರತಿ ಪೂಜೆ ನೆರವೇರಿಸಿಕೊಂಡು ಬರಲಾಗುತ್ತಿತ್ತು. ಟಿಪ್ಪು ಕಾಲದ ಈ ಪೂಜೆಗೆ ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ರಾಜ್ಯ ಧಾರ್ಮಿಕ ಪರಿಷತ್ ಹೊಸ ಆದೇಶ ಹೊರಡಿಸಿದ್ದು, ಇನ್ಮುಂದೆ ದೇವಾಲಯಗಳಲ್ಲಿ ಸಲಾಂ ಆರತಿ ಪೂಜೆ ನಡೆಸುವಂತಿಲ್ಲ. ಅದರ ಬದಲಾಗಿ ಸಂಧ್ಯಾಕಾಲದಲ್ಲಿ ದೇವಾಲಗಳಲ್ಲಿ ದೀಪ ನಮಸ್ಕಾರ ಪೂಜೆ ನೆರವೇರಿಸುವಂತೆ ಆದೇಶ ಹೊರಡಿಸಿದೆ.
ದೀಪ ನಮಸ್ಕಾರ ರಾಜ, ಮಂತ್ರಿ, ಪ್ರಜೆಗಳ ಒಳಿತಿಗಾಗಿ ಸಂಕಲ್ಪ ಮಾಡಿಕೊಂಡು ಪೂಜೆ ನರವೇರಿಸಬೇಕು ಎಂದು ಸುತ್ತೋಲೆ ಹೊರಡಿಸಿದೆ.
ಅಲ್ಲದೇ ಮುಜರಾಯಿ ಇಲಾಖೆ ಹೆಸರನ್ನೂ ಬದಲಿಸಿರುವ ಧಾರ್ಮಿಕ ಪರಿಷತ್, ಇನ್ಮುಂದೆ ಮುಜರಾಯಿ ಇಲಾಖೆಯನ್ನು ಧರ್ಮಾದಾಯ ದತ್ತಿ ಇಲಾಖೆ ಎಂದು ಮರುನಾಮಕರಣ ಮಾಡಿದೆ. ಈ ಕುರಿತು ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಮಾಹಿತಿ ನೀಡಿದ್ದಾರೆ.
ಟಿಪ್ಪು ಸುಲ್ತಾನ್ ಆಡಳಿತ ಕಾಲದಲ್ಲಿ ರಾಜ್ಯದ ಪ್ರಮೂಖ ದೇವಾಲಗಳಿಗೆ ಪ್ರದೋಷ ಪೂಜೆಯ ಸಂದರ್ಭದಲ್ಲಿ ಭೇಟಿ ನೀಡಿ ಸಲಾಮ್ ಮಾಡಿದ್ದ. ಈ ಹಿನ್ನೆಲೆಯಲ್ಲಿ ರಾಜ್ಯದ ಹಲವು ದೇವಾಲಯಗಳಲ್ಲಿ ಇಂದಿಗೂ ಸಂಧ್ಯಾಕಾಲದಲ್ಲಿ ಸಲಾಂ ಮಂಗಳಾರತಿ ಹೆಸರಲ್ಲಿ ಪೂಜೆ ನೆರವೇರಿಸಲಾಗುತ್ತಿತ್ತು. ದೇವಸ್ಥಾಗಳಲ್ಲಿ ಸಲಾಂ ಮಂಗಳಾರತಿ ಹೆಸರಲ್ಲಿ ಪೂಜೆ ಸರಿಯಲ್ಲ ಎಂದು ಹಿಂದೂಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಜಡಿ ಮಳೆ- ಶೀತಗಾಳಿ ಎಚ್ಚರಿಕೆ; 10 ಜಿಲ್ಲೆಗಳಲ್ಲಿ ಅಲರ್ಟ್ ಘೋಷಣೆ
https://pragati.taskdun.com/mandous-cyclonekarnatakaheavy-raincold/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ