ಪ್ರಗತಿವಾಹಿನಿ ಸುದ್ದಿ: ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯಾಗಿರುವುದು ನಿಜವೆಂದು ಟಿಟಿಡಿ ಅಧಿಕಾರಿ ಸ್ವತಃ ಒಪ್ಪಿಕೊಂಡಿದ್ದಾರೆ. ಹಾಗಿದ್ದರೆ ಗೊತ್ತಿದ್ದೂ ಟಿಟಿಡಿ ಅಧಿಕಾರಿಗಳು ಸುಮ್ಮನಾಗಿದ್ದು ಇಂತದ್ದೊಂದು ಪ್ರಮಾದಕ್ಕೆ ಕಾರಣರಾಗಿದ್ದರೆಯೇ ಎಂಬ ಪ್ರಶ್ನೆ ಮೂಡಿದೆ.
ತಿರುಮಲದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟಿಟಿಡಿ ಎಕ್ಸಿಕುಟೀವ್ ಆಫೀಸರ್ ಶ್ಯಾಮಲ್ ರಾವ್, ಲಡ್ಡು ಪ್ರಸಾದ ತುಪ್ಪದಲ್ಲಿ ಕಲಬೆರಕೆಯಾಗಿರುವುದು ನಿಜ. ಲಡ್ಡು ತಯಾರಿಕೆಗೆ ಪೂರೈಸಲಾಗಿದ್ದ ತುಪ್ಪ ಬಹಳ ಕಲಬೆರಕೆಯಿಂದ ಕೂಡಿತ್ತು. ಲ್ಯಾಬ್ ಟೆಸ್ಟ್ ಮಾಡಿಸಿದಾಗ ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.
ಗುಜರಾತ್ ನ ಎನ್ ಡಿಡಿಬಿ ಸಿಎ ಎಲ್ ಎಫ್ ಲ್ಯಾಬ್ ಗೆ ತುಪ್ಪದ ಮಾದರಿ ಕಳುಹಿಸಿದ್ದೆವು. ಈ ವೇಳೆ ಲ್ಯಾಬ್ ವರದಿ ನೋಡಿ ನಮಗೂ ಆಘಾತವಾಗಿದೆ. ತುಪ್ಪದಲ್ಲಿ ಮೀನಿನ ಎಣ್ಣೆ, ಪ್ರಾಣಿಗಳ ಕೊಬ್ಬು, ಹಂದಿಯ ಕೊಬ್ಬು, ಪಾಮಾಯಿಲ್, ಸೋಯಾಬಿನ್, ಸೂರ್ಯಕಾಂತಿ ಎಣ್ಣೆ, ಮೆಕ್ಕೆಜೋಳ ಎಣ್ಣೆ ಇರುವುದು ದೃಢಪಟ್ಟಿದೆ. ಲಡ್ಡು ಪ್ರಸಾದಕ್ಕೆ ಪೂರೈಕೆ ಆಗಿರುವ ತುಪ್ಪದಲ್ಲಿ ಕಲಬೆರಕೆ ಆಗಿರುವುದು ನಿಜ ಎಂದು ತಿಳಿಸಿದರು.
ತುಪ್ಪ ಪೂರೈಸಿದ ಎಆರ್ ಡೇರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಟಿಟಿಡಿ ಬಳಿ ಲ್ಯಾಬ್ ಇಲ್ಲದಿರುವುದರಿಂದ ಈ ಹಿಂದೆ ನಾವು ಟೆಸ್ಟ್ ಮಾಡಿರಲಿಲ್ಲ. ಈಗಿನ ವರದಿಯಲ್ಲಿ 20.32ರಷ್ಟು ಕಲಬೆರಕೆ ತುಪ್ಪ ಇರುವುದು ದೃಢವಾಗಿದೆ. ಹಿಂದಿನ ಸರ್ಕಾರ ತುಪ್ಪ ಪೂರೈಕೆಗೆ 5 ಕಂಪನಿಗಳನ್ನು ಅಂತಿಮಗೊಳಿಸಿತ್ತು ಎಂದು ವಿವರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ