Latest

*ಶ್ರೀಕ್ಷೇತ್ರ ತಿರುಪತಿಯಲ್ಲಿ ರಮ್ಯಾ ಸುಧೀರ್ ಅವರ ಊಂಜಲ್ ಸಂಗೀತ ಸೇವೆ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಸಂಗೀತ ಕಲಾವಿದೆ ರಮ್ಯಾ ಸುಧೀರ್ ಅವರು ಶ್ರೀಕ್ಷೇತ್ರ ತಿರುಪತಿಯ ಶ್ರೀ ಗೋವಿಂದರಾಜಸ್ವಾಮಿಯ ಸನ್ನಿಧಿಯಲ್ಲಿ ಸಂಗೀತ ಕಾರ್ಯಕ್ರಮ ನೀಡುವ ಮೂಲಕ ಗಮನ ಸೆಳೆದಿದ್ದಾರೆ.


ಶ್ರೀಕ್ಷೇತ್ರ ತಿರುಪತಿಯ ಶ್ರೀ ಗೋವಿಂದರಾಜಸ್ವಾಮಿಯ ಸನ್ನಿಧಾನದ ಆವರಣದಲ್ಲಿ ಟಿ ಟಿ ಡಿ ದಾಸಸಾಹಿತ್ಯ ಪ್ರಾಜೆಕ್ಟ್ ನ ವಿಶೇಷಾಧಿಕಾರಿ ಡಾ|| ಆನಂದತೀರ್ಥಾಚಾರ್ ಪಗಡಾಲ ಅವರು ಬೆಂಗಳೂರಿನ ಶ್ರೀಮತಿ ರಮ್ಯಾ ಸುಧೀರ್ ಅವರಿಗೆ ಸೆಪ್ಟೆಂಬರ್ 19, ಗುರುವಾರದಂದು ಸಹಸ್ರ ದೀಪಾಲಂಕಾರಣ ‌ಸೇವೆಯ ವೇಳೆ ಗಾಯನ ಸೇವೆ ಮಾಡಲು ಅವಕಾಶ ಕಲ್ಪಿಸಿದ್ದರು. ರಮ್ಯಾ ಸುಧೀರ್ ಅವರು ಸುಮಧುರ ಕಂಠದಿಂದ ದೇವರನಾಮ ಪ್ರಸ್ತುತ ಪಡಿಸಿ, ಭಕ್ತಿ ಸಮರ್ಪಿಸಿದರು. ದೇಶದ ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತಾದಿಗಳು ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತಿಯಲ್ಲಿ ಮಿಂದೆದ್ದರು. ಇವರ ಗಾಯನಕ್ಕೆ ಪಿಟೀಲು ವಾದನದಲ್ಲಿ ನಾಗೇಶ್ವರರಾವ್, ತಬಲಾ ವಾದನದಲ್ಲಿ ಶಂಕರ್ ರೆಡ್ಡಿಯವರು ಸಾಥ್ ನೀಡಿದರು.

Home add -Advt

Related Articles

Back to top button