
ಪ್ರಗತಿವಾಹಿನಿ ಸುದ್ದಿ; ತಿರುಪತಿ: ತಿರುಪತಿ ಬಳಿ ಚಲಿಸುತ್ತಿದ್ದ ರೈಲಿನಲ್ಲಿ ರಾಜ್ಯದ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಮೈಸೂರು ಮೂಲದ 35 ಜರು ಆಂಧ್ರಪ್ರದೇಶದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳಿದ್ದರು. ತಿರುಪತಿಯಿಂದ ವಾಪಸ್ ರೈಲಿನಲ್ಲಿ ಬರುವಾಗ ಗಲಾಟೆಯಾಗಿದ್ದು, ರಾಜ್ಯದ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ರೈಲಿನಲ್ಲಿ ಸೀಟ್ ವಿಚಾರವಾಗಿ ಜಗಳ ನಡೆದಿದ್ದು, ಇದೇ ವಿಚಾರವಾಗಿ ಪ್ರಯಾಣಿಕರ ಮೇಲೆ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ