ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆಎಲ್ಎಸ್ ಐಎಂಇಆರ್ ಟೋಸ್ಟ್‌ಮಾಸ್ಟರ್ಸ್ ಕ್ಲಬ್ ಜನವರಿಯಿಂದ ಜೂನ್ ವರೆಗಿನ ಅವಧಿಯ ಹೊಸ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಐಎಂಇಆರ್ ಸಭಾಂಗಣದಲ್ಲಿ ಜರುಗಿತು.
ಅಧ್ಯಕ್ಷರಾಗಿ ಚೈತನ್ಯ ಹಾಲ್ಗೇಕರ್, ಶಿಕ್ಷಣ ಉಪಾಧ್ಯಕ್ಷೆಯಾಗಿ ರೋಹಿಣಿ ಬೆಂಬಳಗಿ, ಸದಸ್ಯತ್ವಉಪಾಧ್ಯಕ್ಷೆಯಾಗಿ ದಿಶಾ ಪಾಟೀಲ್, ಸಾರ್ವಜನಿಕ ಸಂಪರ್ಕ ಉಪಾಧ್ಯಕ್ಷರಾಗಿ ಮುರಳಿ ಗುಮಾಸ್ತೆ, ಕಾರ್ಯದರ್ಶಿಯಾಗಿ ವರದ್ ಗುರವ್, ಖಜಾಂಚಿಯಾಗಿ ಸುಭಾಷ್ ಪುಟ್ಟಿ ಹಾಗೂ ಸಾರ್ಜೆಂಟ್ ಆಗಿ ನಿಖಿಲ್ ಮೋರೆ ಪದಗ್ರಹಣ ಮಾಡಿದರು.
ವಲಯ ನಿರ್ದೇಶಕ ನಾಗರಾಜ ಪಾಟೀಲ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ನಿವೃತ್ತ ಕರ್ನಲ್ ಆರ್.ಜಿ.ಜಾಧವ್ ಮಾತನಾಡಿ, ಎಲ್‌ಟಿಟಿಇ ವಿರುದ್ಧ ಹೋರಾಡುತ್ತಿರುವಾಗ ಶ್ರೀಲಂಕಾದಲ್ಲಿ 7 ಅಸ್ಸಾಂ ರೆಜಿಮೆಂಟ್‌ಗೆ ಕಮಾಂಡರ್ ಆಗಿದ್ದ ಅವಧಿಯ ಘಟನೆಗಳನ್ನು ಮೆಲುಕು ಹಾಕಿದರು. ಕ್ಲಬ್ ನ ನಿಕಟಪೂರ್ವ ಅಧ್ಯಕ್ಷೆ ಚಿತ್ರಾ ವೀರೇಶ್ ಅವರು ತಮ್ಮ ಅವಧಿಯ ಚಟುವಟಿಕೆಗಳು ಮತ್ತು ಸಾಧನೆಗಳನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಕ್ಲಬ್‌ನ ನೂತನ ಅಧ್ಯಕ್ಷ ಚೈತನ್ಯ ಹಲ್ಗೇಕರ ಅವರು ಸದಸ್ಯರು ಹೆಚ್ಚು ಕ್ರಿಯಾಶೀಲರಾಗಿ ಕ್ಲಬ್ ಕಾರ್ಯಕ್ರಮಗಳನ್ನು ಆನಂದಿಸಿ ತಮ್ಮ ಗುರಿಗಳನ್ನು ಸಾಧಿಸಲು ಕೋರಿದರು.
ಕೆಎಲ್ಎಸ್ ಐಎಂಇಆರ್ ಟೋಸ್ಟ್‌ಮಾಸ್ಟರ್ಸ್ ಕ್ಲಬ್, ಬೆಳಗಾವಿಯ ಏಕೈಕ ಕ್ರಿಯಾತ್ಮಕ ಸಂಸ್ಥೆಯಾಗಿದೆ. ಈ ಕ್ಲಬ್ ಸದಸ್ಯರ ಸಂವಹನ ಮತ್ತು ನಾಯಕತ್ವ ಕೌಶಲಗಳನ್ನು ಸುಧಾರಿಸಲು ಮೀಸಲಾಗಿದೆ. 18 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ಕ್ಲಬ್‌ನ ಸದಸ್ಯರಾಗಬಹುದು. ಸದಸ್ಯರ ಮಾತನಾಡುವ ಕೌಶಲ ಮತ್ತು ಆತ್ಮವಿಶ್ವಾಸವನ್ನು ಸುಧಾರಿಸಲು ಕ್ಲಬ್ ನಿಯಮಿತ ಸಭೆಗಳನ್ನು ನಡೆಸುತ್ತದೆ.
ರಮೇಶ್ ಜಾರಕಿಹೊಳಿ ಸಿಡಿ ವಿಷಯ ಮಾತಾಡಿಲ್ಲ – ಬೊಮ್ಮಾಯಿ
https://pragati.taskdun.com/%e0%b2%b0%e0%b2%ae%e0%b3%87%e0%b2%b6%e0%b3%8d-%e0%b2%9c%e0%b2%be%e0%b2%b0%e0%b2%95%e0%b2%bf%e0%b2%b9%e0%b3%8a%e0%b2%b3%e0%b2%bf-%e0%b2%b8%e0%b2%bf%e0%b2%a1%e0%b2%bf-%e0%b2%b5%e0%b2%bf%e0%b2%b7/
ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ಹೇಳಿದ್ದೇನು? ಯಾರ್ಯಾರಿಗೆಲ್ಲ ‘ಚುರುಕ್’ ಅನುಭವ ನೀಡಿದೆ ಬಜೆಟ್?
https://pragati.taskdun.com/what-did-nirmala-sitharaman-say-who-presented-the-budget/
ಮದುವೆಮನೆಯಲ್ಲಿ ಅವಘಡ; 14 ಜನರ ಸಾವು
https://pragati.taskdun.com/mishap-in-the-marriage-house-14-people-died/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ