ರಾಜ್ಯದಲ್ಲಿ ಇಂದು 105 ಜನರಿಗೆ ಕೊರೋನಾ ಸೋಂಕು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 51 ಜನರು ಸೇರಿದಂತೆ ರಾಜ್ಯದಲ್ಲಿ ಇಂದು ಒಟ್ಟೂ 105 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 1710ಕ್ಕೇರಿದೆ.

ಬೆಳಗಾವಿಯ ಶಿರಗುಪ್ಪಿಯಲ್ಲಿ 1(ಜಾರ್ಖಂಡ್ ನಿಂದ ವಾಪಸ್ ಬಂದಿರುವ ವ್ಯಕ್ತಿ), ಉತ್ತರ ಕನ್ನಡದಲ್ಲಿ 1, ಧಾರವಾಡದಲ್ಲಿ 3, ಹಾವೇರಿಯಲ್ಲಿ 3, ಬೀದರ್ ನಲ್ಲಿ 6, ಬೆಂಗಳೂರಿನಲ್ಲಿ 5, ತುಮಕೂರು 8, ವಿಜಯಪುರದಲ್ಲಿ 2, ಮಂಡ್ಯದಲ್ಲಿ 3, ಬಾಗಲಕೋಟೆಯಲ್ಲಿ 1, ದಾವಣಗೆರೆಯಲ್ಲಿ 3, ಹಾಸನದಲ್ಲಿ 14 ಜನರಿಗೆ ಸೋಂಕು ಪತ್ತೆಯಾಗಿದೆ.

ಇಂದು ಪತ್ತೆಯಾಗಿರುವವರಲ್ಲಿ 81 ಜನರಿಗೆ ಮಹಾರಾಷ್ಟ್ರ ಸಂಪರ್ಕ ಇರುವುದು ಪತ್ತೆಯಾಗಿದೆ. 25 ಜನ 18 ವರ್ಷದೊಳಗಿನ ಮಕ್ಕಳಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button