ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ತೆಲುಗು ಚಿತ್ರರಂಗದ ಜನಪ್ರಿಯ ಹಿರಿಯ ನಟ ಚಲಪತಿ ರಾವ್ ಹೃದಯಾಘಾತದಿಂದ ಮೃತಪಟ್ತಿರುವ ಘಟನೆ ನಡೆದಿದೆ. ಅವರಿಗೆ 78 ವರ್ಷ ವಯಸ್ಸಾಗಿತ್ತು.
ಆಂಧ್ರಪ್ರದೇಶದ ಬಾಲಿಪುರ್ ಮೂಲದ ಚಲಪತಿ ರಾವ್ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಬೆಳಿಗ್ಗೆ ಹೃದಯಾಘಾತದಿದ ನಿಧನರಾಗಿದ್ದಾರೆ.
ತೆಲುಗು ಚಿತ್ರರಂಗದಲ್ಲಿ ಪೋಷಕ ನಟರಾಗಿ, ಕಾಮಿಡಿ ಹಾಗೂ ವಿಲನ್ ಎರಡೂ ಪಾತ್ರಗಳಲ್ಲಿ ಅಭಿನಯಿಸಿದ್ದರು. ಎನ್ ಟಿ ಆರ್ ಅವರು ಚಲಪತಿಯವರನ್ನು ಸಿನಿಮಾರಂಗಕ್ಕೆ ಪರಿಚಯಿಸಿದ್ದರು. 1966ರಲ್ಲಿ ಗೂಢಚಾರಿ 116 ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು.
ತೆಲುಗಿನ ಎನ್ ಟಿ ಆರ್, ಕೃಷ್ಣ, ನಾಗಾರ್ಜುನ, ಚಿರಂಜೀವಿ, ವೆಂಕಟೇಶ್ ಸೇರಿದಂತೆ ಹಲವು ಘಟಾನುಘಟಿ ನಾಯಕರೊಂದಿಗೆ ಚಲಪತಿ ರಾವ್ ಅಭಿನಯಿಸಿದ್ದರು. ಹಿರಿಯ ನಟನ ಅಗಲಿಕೆಗೆ ಟಾಲಿವುಡ್ ಕಂಬನಿ ಮಿಡಿದೆ.
*ಗುಡುಗು, ಮಿಂಚು ಸಹಿತ ಮತ್ತೆ ಭಾರಿ ಮಳೆ ಎಚ್ಚರಿಕೆ*
https://pragati.taskdun.com/heavy-raintamilnaduimdalert/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ