ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪುಟ್ಟ ಮಕ್ಕಳಲ್ಲಿ ಟೊಮೆಟೊ ಜ್ವರ ಪತ್ತೆಯಾಗುತ್ತಿದ್ದು, ಕೊರೊನಾ ನಾಲ್ಕನೇ ಅಲೆ ಭೀತಿ ನಡುವೆಯೇ ಹೊಸ ಸೊಂಕು ಮಕ್ಕಳನ್ನು ಕಾಡಲು ಆರಂಭಿಸಿದೆ.
ಕೇರಳದಲ್ಲಿ 80ಕ್ಕೂ ಹೆಚ್ಚು ಮಕ್ಕಳಲ್ಲಿ ಇಂತದ್ದೊಂದು ವಿಚಿತ್ರ ಜ್ವರ ಕಾಣಿಸಿಕೊಂಡಿದ್ದು, ರಾಜ್ಯದಲ್ಲಿಯೂ ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.
ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿರುವ ಸಚಿವ ಡಾ.ಸುಧಾಕರ್, ಟೊಮೆಟೊ ಜ್ವರ ಭೀತಿ ಆರಂಭವಾಗಿದೆ. ಮಕ್ಕಳಲ್ಲಿ ಈ ಜ್ವರ ಹೆಚ್ಚಾಗಿ ಕಾಡುತ್ತಿದ್ದು, ಎಚ್ಚರ ವಹಿಸುವುದು ಉತ್ತಮ ಎಂದಿದ್ದಾರೆ. ಟೊಮೆಟೊ ಜ್ವರಕ್ಕೂ ಕೋವಿಡ್ ಗೂ ಯಾವುದೆಸಂಬಂಧವಿಲ್ಲ. ಹಿಂದೆಯೂ ಇಂತಹ ಫ್ಲೂ ಇತ್ತು ಎಂದು ತಜ್ಞರು ಹೇಳಿದ್ದಾರೆ. ಆದರೆ ರೋಗ ಲಕ್ಷಣ ಕಂಡುಬಂದರೆ ತಕ್ಷಣ ಟೆಸ್ಟ್ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವಂತೆ ತಿಳಿಸಿದ್ದಾರೆ.
ಕೇರಳದ ಅರ್ಯಂಕಾರು, ಅಂಚಲ್, ನೆಡುವತೂರು ಪ್ರದೇಶಗಳಲ್ಲಿ 5 ವರ್ಷದ ಮಕ್ಕಳಲ್ಲಿ ಟೊಮೆಟೊ ಜ್ವರ ಕಾಣಿಸಿಕೊಂಡಿದೆ. ವಿಪರೀತ ಜ್ವರ, ಚರ್ಮದ ತುರಿಕೆ, ಮೈಕೈ ನೋವು, ಕೀಲು ನೋವು, ಆಯಾಸ, ಚರ್ಮದ ಮೇಲೆ ಕೆಂಪು ಗುಳ್ಳೆಗಳು ಕಂಡುಬರುತ್ತಿವೆ. ಇಂತಹ ಲಕ್ಷಣ ಕಂಡುಬಂದಲ್ಲಿ ತಕ್ಷಣ ಚಿಕಿತ್ಸೆ ಪಡೆದುಕೊಳ್ಳುವಂತೆ ಆರೋಗ್ಯ ಇಲಾಖೆ ತಿಳಿಸಿದೆ.
ಇನ್ನು ಕರ್ನಾಟಕ ಹಾಗೂ ಕೇರಳದ ಗಡಿ ಜಿಲ್ಲೆಗಳಾದ ಮಂಗಳೂರು, ಉಡುಪಿ, ಕೊಡಗು, ಚಾಮರಾಜನಗರ ಹಾಗೂ ಮೈಸೂರಿನಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದ್ದು, ಕೇರಳದಿಂದ ಆಗಮಿಸುವ ಪ್ರಯಾಣಿಕರನ್ನು ತಪಾಸಣೆಗೊಳಪಡಿಸಲಾಗುತ್ತಿದೆ.
ದೆಹಲಿಯಿಂದ ವಾಪಸ್ ಆದ ಗೃಹ ಸಚಿವರು ಹೇಳಿದ್ದೇನು?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ