ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವರ್ಷವಿಡೀ ರೈತರಿಗೆ ಲಾಭ ಮಾಡಿದ ಟೊಮೇಟೊ ಮತ್ತೆ 100 ರೂಪಾಯಿಗೆ ಏರಿಕೆ ಆಗಿದೆ. ಅತ್ತ ಗ್ರಾಹಕರು ಬೆಳಗಾವಿ ಮಾರುಕಟ್ಟೆಯಲ್ಲಿ ಟೊಮೇಟೊ ಬೆಲೆ ಕೇಳಿ ಶಾಕ್ ಆಗುತ್ತಿದ್ದಾರೆ.
ಟೊಮೇಟೊ ಬೆಲೆ ಮತ್ತೆ ಹೆಚ್ಚಾಗಿದ್ದು, ಗ್ರಾಹಕರು ದಂಗಾಗಿದ್ದಾರೆ. ಟೊಮೇಟೊ ಬೆಲೆ ಹೆಚ್ಚಳದಿಂದ ರೈತರು ಫುಲ್ ಖುಷ್ ಆಗಿದ್ದರೆ, ಇತ್ತ ಬೆಲೆ ಹೆಚ್ಚಳದಿಂದ ಜನರು ಟೊಮೇಟೊ ಪರ್ಯಾಯವಾಗಿರುವ ಹುಣಿಸೆ ಹಣ್ಣಿನ ಖರೀದಿ ಕಡೆ ಮುಖ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಗೆ ಹೆಚ್ಚಾಗಿ ಮಹಾರಾಷ್ಟ್ರದಿಂದ ಟೊಮೇಟೊ ಆಮದು ಮಾಡಿಕೊಳ್ಳಲಾಗುತ್ತದೆ ಆದರೆ, ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿದ್ದರಿಂದ ಟೊಮೇಟೊ ಆಮದು ನಿಲ್ಲಿಸಲಾಗಿದೆ ಅಂತೆ. ಮಳೆ ಕಡಿಮೆ ಆಗುವ ವರೆಗೆ ಮತ್ತೆ ಟೊಮೇಟೊ ಬೆಲೆ 200 ರೂಪಾಯಿ ಗಡಿದಾಟುವ ಸಾಧ್ಯತೆಗಳಿವೆ.
ಬೆಳಗಾವಿ ಜಿಲ್ಲೆಯಲ್ಲಿ ಬೆಳೆಯುವ ಟೊಮೇಟೊ ಹೆಚ್ಚಾಗಿ ಪಕ್ಕದ ಗೋವಾ, ಕೇರಳ ಹಾಗೂ ಹೈದರಾಬಾದ್ ಗೆ ರಪ್ತಾಗುತ್ತೆ. ಜಿಲ್ಲೆಯಲ್ಲಿ ಬೆಳೆಯುವ ಟೊಮೇಟೊ ಬೆರೆ ರಾಜ್ಯಗಳಿಗೆ ರಫ್ತಾಗಿ, ಮಹಾರಾಷ್ಟ್ರದಿಂದ ಜಿಲ್ಲೆಗೆ ಆಮದಾಗುವ ಟೊಮೇಟೊ ಸದ್ಯಕ್ಕೆ ಬಂದ್ ಆಗಿರುವುದರಿಂದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಇನ್ನು, ಬೆಳಗಾವಿ ಎಪಿಎಂಸಿಯಲ್ಲಿ ಉತ್ತಮ ಗುಣಮಟ್ಟದ ಟೊಮೇಟೊ 80-90 ರೂಪಾಯಿಗೆ ಮಾರಾಟವಾಗುತ್ತಿದೆ. ಅದೆ ಟೊಮೇಟೊ ಚಿಲ್ಲರೆ ಮಾರುಕಟ್ಟೆಯಲ್ಲಿ 100 ರೂಪಾಯಿಗೆ ಮಾರಾಟವಾಗುತ್ತಿದೆ. ಇನ್ನು, ಕಡಿಮೆ ಗುಣಮಟ್ಟದ ಟೊಮೇಟೊ ಚಿಲ್ಲರೆ ಮಾರುಕಟ್ಟೆಯಲ್ಲಿ 70-80 ರೂಪಾಯಿಗೆ ಮಾರಾಟವಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ