Kannada NewsLatest

ನಾಳೆ ಶಿವಯೋಗಿ ಧ್ಯಾನ ಮಂದಿರ ಕಟ್ಟಡದ ಅಡಿಗಲ್ಲು ಸಮಾರಂಭ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಬೆಳಗಾವಿ ಸಮೀಪದ ಭೂತರಾಮನಹಟ್ಟಿಯಲ್ಲಿ ಶ್ರೀ ಮದಥಣಿ ಮುರುಘೇಂದ್ರ ಶಿವಯೋಗಿಗಳ ಧ್ಯಾನ ಮಂದಿರ ಟ್ರಸ್ಟ್ ವತಿಯಿಂದ ನೂತನವಾಗಿ ನಿರ್ಮಾಣಗೊಳ್ಳಲಿರುವ ಶ್ರೀ ಶಿವಯೋಗಿ ಧ್ಯಾನ ಮಂದಿರ ಕಟ್ಟಡದ ಅಡಿಗಲ್ಲು ಸಮಾರಂಭವು  ಬುಧವಾರ ಮುಂಜಾನೆ ೧೦ ಗಂಟೆಗೆ ಜರುಗುವುದು.
ಸಮಾರಂಭದ ಸಾನ್ನಿಧ್ಯ ವನ್ನು ಪೂಜ್ಯ ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ತೋಂಟದಾರ್ಯ ಮಠ ಗದಗ ಬೆಳಗಾವಿ ಅವರು ವಹಿಸುವರು.  ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮಿಗಳು,  ಹುಕ್ಕೇರಿ ಹಿರೇಮಠದ ಪೂಜ್ಯ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು,  ಹಿಟ್ನಿಯ ಪ್ರಭುಲಿಂಗ ಶಿವಾಚಾರ್ಯ ಸ್ವಾಮಿಗಳು,  ನಾಗನೂರು ರುದ್ರಾಕ್ಷಿ ಮಠದ ಡಾ. ಸಾವಳಗಿ ದೇವರು ಮತ್ತು ಶೇಗುಣಸಿ ವಿರಕ್ತ ಮಠದ ಮಹಾಂತ ದೇವರು ಸಮಾರಂಭದ ನೇತೃತ್ವ ವಹಿಸುವರು.
ಧ್ಯಾನ ಮಂದಿರ ಟ್ರಸ್ಟ್ ಅಧ್ಯಕ್ಷರಾದ  ಪ್ರಭುಚನ್ನಬಸವ ಸ್ವಾಮೀಜಿ ಅವರ ಸೇವಾ ಸಂಕಲ್ಪ ದಲ್ಲಿ ಧ್ಯಾನ ಮಂದಿರದ ಅಡಿಗಲ್ಲು ಸಮಾರಂಭ ಕೇಂದ್ರ ಸಚಿವ ಸುರೇಶ ಅಂಗಡಿ ಅವರಿಂದ ನೆರವೇರುವುದು. ಅರಣ್ಯ ಸಚಿವ ಸತೀಶ ಜಾರಕಿಹೊಳಿ ಕಾರ್ಯಕ್ರಮ ಉದ್ಘಾಟಿಸುವರು. ಚಿಕ್ಕೋಡಿ ಸಂಸದರಾದ ಅಣ್ಣಾ ಸಾಹೇಬ್ ಜೊಲ್ಲೆ  ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಬೆಳಗಾವಿ ಶಾಸಕರಾದ ಅನಿಲ ಬೆನಕೆ, ಹೊಸ ವಂಟಮುರಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಮಹಾದೇವಿ ಚೌಗಲಾ, ಕಾಕತಿ ಜಿ. ಪಂ. ಸದಸ್ಯ ಸಿದ ಗೌಡ ಸುಣಗಾರ,  ಕಾಕತಿ ತಾ. ಪಂ. ಸದಸ್ಯ ಯಲ್ಲಪ್ಪ ಕೋಳೆಕರ್,  ಎಸ್. ಎಸ್. ಅನಸಾರಿ ಅತಿಥಿಗಳಾಗಿ ಆಗಮಿಸುವರು.
ಧ್ಯಾನ ಮಂದಿರ ಟ್ರಸ್ಟ್ ನ ಸಮಸ್ತ ಪದಾಧಿಕಾರಿಗಳು,  ಶ್ರೀ ಶಿವಯೋಗಿ ಕೋಟಿ ಆಪ್ ಸೊಸೈಟಿ, ಅಥಣಿ ಶ್ರೀ ಶಿವಯೋಗಿ ಮುರುಘೇಂದ್ರ ಅರ್ಬನ್ ಬ್ಯಾಂಕ್ ನ ಸರ್ವ ಪದಾಧಿಕಾರಿಗಳು ಉಪಸ್ಥಿತರಿರುವರು.

 

ಜೂ.12ರಂದು ಶಿವಯೋಗಿ ಧ್ಯಾನ ಮಂದಿರ ಕಟ್ಟಡದ ಅಡಿಗಲ್ಲು

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button