ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು : ಕಿತ್ತೂರಿನ ಸರಕಾರಿ ಮಹಿಳಾ ವೈದ್ಯಾದಿಕಾರಿಗೆ ಕೆಲ ಪುಂಡರು ಜೀವ ಬೆದರಿಕೆ ಹಾಕಿರುವ ಘಟನೆ ಖಂಡಿಸಿ ಗುರುವಾರ ಕಿತ್ತೂರು ಬಂದ್ ನಿರ್ಧಾರವಾಗಿದೆ.
ಕಿತ್ತೂರು ವರ್ತಕ ಸಂಘದಿಂದ ಎಲ್ಲ ವರ್ತಕರು ಸ್ವಯಂ ಪ್ರೇರಿತ ವ್ಯಾಪಾರ ವಹಿವಾಟು ಬಂದ್ ಮಾಡಿ ಆರೋಪಿತರ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿ ತಹಶೀಲ್ದಾರ ಅವರಿಗೆ ಮನವಿ ಪತ್ರ ಸಲ್ಲಿಸಲು ಬುಧವಾರ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದಾರೆಂದು ಸಂಘದ ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಸಾಣಿಕೊಪ್ಪ, ಹನುಮಂತ ಲಂಗೋಟಿ, ಮಲ್ಲಣ್ಣ ಸಾಣಿಕೊಪ್ಪ, ಬಸವರಾಜ ರಾಮಣ್ಣವರ, ಸಂತೋಷ ಕಲಾಲ, ಕಿರಣ ಪಾಟೀಲ, ಸೂರಜ ಕುಪ್ಪಸಗೌಡರ ಇತರರು ತಿಳಿಸಿದ್ದಾರೆ.
ಸ್ವಯಂ ಪ್ರೇರಿತ ಬಂದ್‍ಗೆ ಖಾಸಗಿ ವೈದ್ಯರ ಸಂಘ, ಔಷಧಿ ವ್ಯಾಪಾರಿಗಳ ಮದ್ಯಮಾರಾಟಗಾರರ ಸಂಘದಿಂದ, ನ್ಯಾಯವಾದಿಗಳ ಸಂಘಗಳು ಬೆಂಬಲ ವ್ಯಕ್ತಪಡಿಸಿವೆ.
ವೈದ್ಯೆಯ ಮೇಲೆ ಹಲ್ಲೆಗೆ ಯತ್ನ: ಐವರು ಗೂಂಡಾಗಳ ಬಂಧನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ