ಪ್ರಗತಿವಾಹಿನಿ ಸುದ್ದಿ, ಮುಂಬೈ: ಶೇ.100 ಅಂಕ ಗಳಿಸಿದ್ದರೂ ಜೆಇಇ-2022 ರ ಮೇನ್ಸ್ ಪರೀಕ್ಷೆಯ ಟಾಪರ್ ಒಬ್ಬರು ಮರು ಪರೀಕ್ಷೆ ಬರೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ.
ರಾಜಸ್ಥಾನದ ಹನುಮಾನಗಡ ನಿವಾಸಿಯಾಗಿರುವ ನವ್ಯ ಹಿಜಾರಿಯಾ ಇತ್ತೀಚೆಗೆ ನಡೆದ ಜೆಇಇ-2022 ಮೇನ್ಸ್ ಪರೀಕ್ಷೆಯಲ್ಲಿ ಶೇ.100 ಅಂಕ ಗಳಿಸಿ ಟಾಪರ್ ಎನಿಸಿದ್ದರು.
“ತಮಗೆ ನೀಡಿದ ನಿಗದಿತ ಸಮಯಾವಕಾಶ ಬಳಸಿಕೊಂಡು ಪೇಪರ್ ಹೇಗೆ ಬರೆದು ಮುಗಿಸಬೇಕು ಎಂಬುದನ್ನು ನನಗೆ ಈ ಜೆಇಇ ಮೇನ್ಸ್ ಪರೀಕ್ಷೆಯ ಪ್ರಯತ್ನಗಳು ಹೇಳಿಕೊಟ್ಟಿವೆ. ಇದೊಂದು ರೀತಿಯ ಪ್ರಯತ್ನವಿದ್ದಂತೆ” ಎಂದು ನವ್ಯ ಹಿಜಾರಿಯಾ ಹೇಳಿಕೊಂಡಿದ್ದಾರೆ.
ಅನುಭವ ಪಡೆಯುವ ಉದ್ದೇಶದಿಂದ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವರು ನಿರ್ಧರಿಸಿದ್ದಾರೆ.
ಶೇ.100 ಸಾಧನೆಯ ಟಾಪರ್ ಒಬ್ಬರ ಈ ನಿರ್ಧಾರ ಅನೇಕರಲ್ಲ ಅಚ್ಚರಿ ಮೂಡಿಸಿದೆ.
ಸಾಹಿತಿ ಗಣೇಶ್ ಹೆಗಡೆ ಮನೆ ಮೇಲೆ ಗುಡ್ಡ ಕುಸಿತ; ಪುಸ್ತಕ ಹೊರತರಲಾಗದೇ ಕಣ್ಣೀರಿಟ್ಟ ಬರಹಗಾರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ