
ಪ್ರಗತಿವಾಹಿನಿ ಸುದ್ದಿ: ಗಾಳಿಯ ರಭಸಕ್ಕೆ ಪ್ಯಾರಾಗ್ಲೆಡಿಂಗ್ ಅಪಘಾತವಾದ ಪರಿಣಾಮ ಆಂಧ್ರಪ್ರದೇಶದ ಪ್ರವಾಸಿಗ ಮೃತಪಟ್ಟ ಘಟನೆ ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ನಡೆದಿದೆ.
ತಡಿ ಮಹೇಶ್ ರೆಡ್ಡಿ (32) ಮೃತ ವ್ಯಕ್ತಿ. ಮನಾಲಿ ಬಳಿ ಮಹೇಶ್ ಪ್ಯಾರಾಗ್ಲೆಡಿಂಗ್ ಟೇಕಾಫ್ ಮಾಡಲು ಪ್ರಯತ್ನಿಸುತ್ತಿದ್ದ. ಈ ವೇಳೆ ಜೋರಾಗಿ ಗಾಳಿ ಬೀಸಿದ್ದರಿಂದ ಪ್ಯಾರಾಗ್ಲೆಡರ್‌ನ ಹಾರಾಟದ ಹಾದಿಗೆ ಅಡ್ಡಿ ಉಂಟಾಗಿದೆ. ಇದರಿಂದಾಗಿ ಅದು ಮೇಲಕ್ಕೆ ಹೋಗುವ ಬದಲು ಕೆಳಕ್ಕೆ ಇಳಿಯಿತು.
ಈ ವೇಳೆ ಗಂಭೀರ ಗಾಯಗೊಂಡಿದ್ದ ರೆಡ್ಡಿಯನ್ನು ತಕ್ಷಣವೇ ಭುಂತರ್‌ನಲ್ಲಿರುವ ಹರಿಹರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೂ ಅವರ ಆರೋಗ್ಯ ಇನ್ನೂ ಹದಗೆಟ್ಟಿದ್ದು, ಅವರನ್ನು ಮಂಡಿಯ ವೈದ್ಯಕೀಯ ಕಾಲೇಜಿಗೆ ವರ್ಗಾಯಿಸಲಾಯಿತು. ಆದರೆ ಅಲ್ಲಿ ವೈದ್ಯರು ರೆಡ್ಡಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಘಟನೆಗೆ ಸಂಬಂಧಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಅಪಘಾತದ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ