Kannada NewsKarnataka NewsLatest

ಟ್ರ್ಯಾಕ್ಟರ್ ಬರ್ತ್ ಡೇ!

 ಟ್ಯಾಕ್ಟರ್ ಗೆ ಮೂರನೇಯ ವಷ೯ದ  ಪ್ರಯುಕ್ತ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ ಅನ್ನದಾತ

ಪ್ರಗತಿವಾಹಿನಿ ಸುದ್ದಿ, ಮೂಡಲಗಿ – :  ನೀವು ಇಷ್ಟು ದಿನಗಳ ಕಾಲ ಮನುಷ್ಯ ಹಾಗೂ ತಮ್ಮ ನೆಚ್ಚಿನ ಪ್ರಾಣಿ ಪಕ್ಷಿಗಳ ಹುಟ್ಟು ಹಬ್ಬ ಆಚರಿಸುತ್ತಿರುವುದನ್ನು ಕೇಳಿದ್ದೀರಿ, ನೋಡಿದ್ದೀರಿ.
ರೈತನೊಬ್ಬ ತನ್ನ ಜೀವನಕ್ಕೆ ಆಧಾರವಾಗಿರುವ ತಮ್ಮ ಟ್ಯ್ರಾಕ್ಟರ್  ಹುಟ್ಟು ಹಬ್ಬ ಆಚರಿಸಿದ  ವಿಚಿತ್ರ ಸಂಗತಿ ಇಲ್ಲಿದೆ.
ಮೂಡಲಗಿ ಪಟ್ಟಣದ ರೈತ ಪ್ರಕಾಶ ಬಸವಣ್ಣೆಪ್ಪಾ ವಾಲಿ ತಮ್ಮ ಟ್ಯಾಕ್ಟರ್ ಗೆ ಎರಡು ವಷ೯ ಪೂರೈಸಿ ಮೂರನೇ ವಷ೯ಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ  ಅವರ ತೋಟದ ಮನೆಯಲ್ಲಿ  ಕೇಕ್ ಕತ್ತರಿಸುವುದರ ಮೂಲಕ  ಸರಳ ರೀತಿಯಲ್ಲಿ ಹುಟ್ಟುಹಬ್ಬವನ್ನು  ಆಚರಿಸರಿಸಿದ್ದಾರೆ.
ಸ್ನೇಹಿತರೊಂದಿಗೆ ಚಾ ಪಾಟಿ೯ ಮಾಡಿ ಸಿಹಿ ಹಂಚುವುದರ ಮುಖಾಂತರ ಹುಟ್ಟು ಹಬ್ಬ ಆಚರಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಕಾಶ ಬಸವಣ್ಣೆಪ್ಪಾ ವಾಲಿ, ಸಂಜಯ ಕುಡಚಿ , ಸಿದ್ದಪ್ಪಾ ವಾಲಿ, ವಿನಾಯಕ ವಾಲಿ, ವೈಷ್ಣವಿ ವಾಲಿ, ವಿರೇಂದ್ರ ವಾಲಿ, ಸುಭಾಸ ವಾಲಿ, ಲಕ್ಷ್ಮೀ ವಾಲಿ ಹಾಜರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button