ಪ್ರಗತಿವಾಹಿನಿ ಸುದ್ದಿ: “ಅಂತರ್‍ರಾಷ್ಟ್ರೀಯ ಪ್ರಜಾಪ್ರಭುತ್ವ” ದಿನಾಚರಣೆಯ ಹಿನ್ನೆಲೆಯಲ್ಲಿ ಬೆಳಗಾವಿ ಕಮೀಷನರೇಟ್ ವ್ಯಾಪ್ತಿಯ ಕರಡಿಗುದ್ದಿ ಗ್ರಾಮದ ಗಡಿಯಿಂದ ಹಿರೇಬಾಗೇವಾಡಿ ಗ್ರಾಮದ ಗಡಿಯವರೆಗೆ 53 ಕಿಮೀ ವರೆಗೆ ‘ಮಾನವ ಸರಪಳಿ’ ನಿರ್ಮಾಣ ಕಾಯಕ್ರಮವನ್ನು ಜಿಲ್ಲಾಡಳಿತದ ವತಿಯಿಂದ ಕೈಕೊಳ್ಳಲಾಗುತ್ತಿದೆ.
ಬೆಳಿಗ್ಗೆ 9 ಗಂಟೆಯಿಂದ 11 ಗಂಟೆಯವರೆಗೆ ಬೆಳಗಾವಿ ನಗರ ವ್ಯಾಪ್ತಿ, ಮಾರಿಹಾಳ ಮತ್ತು ಹಿರೇಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿಯ ಎಲ್ಲ ವಿಧದ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.
ಕರಡಿಗುದ್ದಿ ಗ್ರಾಮ ಗಡಿಯಿಂದ ಮಾರುತಿ ನಗರ ಮೂಲಕ ರಾಷ್ಟ್ರೀಯ ಹೆದ್ದಾರಿ ಸೇರುವ ಮಾರ್ಗದಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದ್ದು, ಇದಕ್ಕೆ ಪರ್ಯಾಯವಾಗಿ ಬೆಳಗಾವಿ ನಗರದಿಂದ ಗೋಕಾಕ, ನೇಸರಗಿ ಯರಗಟ್ಟಿ, ರಾಮದುರ್ಗ ಮತ್ತಿತರ ಕಡೆಗಳಿಗೆ ಚಲಿಸುವ ವಾಹನಗಳು ಕನಕದಾಸ ಸರ್ಕಲ್, ಕಣಬರ್ಗಿ ಅಂಡರ್ ಬ್ರಿಡ್ಜ್ ಮೂಲಕ ಸಂಚರಿಸಲು ಸೂಚಿಸಲಾಗಿದೆ.
ಬೈಲಹೊಂಗಲ ಕಡೆಯಿಂದ ಹಿರೇಬಾಗೇವಾಡಿ ಬಸವ ಸರ್ಕಲ್ ಕಡೆಗೆ ಬರುವ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದ್ದು, ಬೈಲಹೊಂಗಲ ಮೂಲಕ ಪರ್ಯಾಯ ಮಾರ್ಗವನ್ನು ಅನುಸರಿಸಿ ಸಂಚರಿಸಲು ಸೂಚಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ