
ಪ್ರಗತಿವಾಹಿನಿ ಸುದ್ದಿ : ದುರ್ಗಾಪೂಜೆಯ ಕೊನೆಯ ದಿನವಾದ ವಿಜಯದಶಮಿಯಂದು ದುರ್ಗಾ ಮೂರ್ತಿಯನ್ನು ವಿಸರ್ಜಿಸುವ ವೇಳೆ ಅಬ್ಬಾ ನದಿಯಲ್ಲಿ ಮುಳುಗಿ 12 ಮಂದಿ ಮೃತಪಟ್ಟಿದ್ದಾರೆ.
ಈ ಘಟನೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲಿಯಲ್ಲಿ ಸಂಭವಿಸಿದೆ. ಟ್ರಾಕ್ಟರ್ ನಲ್ಲಿ ದುರ್ಗಾ ಮೂರ್ತಿಯನ್ನು ವಿಸರ್ಜಿಸಲು ನದಿಗೆ ಕೊಂಡೊಯ್ದಾಗ ಈ ದುರ್ಘಟನೆ ಸಂಭವಿಸಿದೆ.
ಮುಂದೆ ಹೋಗಬೇಡಿ ಎಂದು ಎಚ್ಚರಿಕೆ ನೀಡಿದರೂ ಸಹ ಯುವಕರು ಅತ್ಯುತ್ಸಾಹದಿಂದ ಮುನ್ನುಗ್ಗಿ ಪ್ರಾಣ ತೆತ್ತಿದ್ದಾರೆ. ಟ್ರಾಕ್ಟರ್ ನಲ್ಲಿದ್ದ 15 ಮಂದಿಯ ಪೈಕಿ ಮೂವರನ್ನು ರಕ್ಷಿಸಲಾಗಿದ್ದು ಮಿಕ್ಕವರು ನೀರು ಪಾಲಾಗಿದ್ದಾರೆ.
ಮೃತರಲ್ಲಿ ಆರು ಮಂದಿ ಹೆಣ್ಣುಮಕ್ಕಳು ಓರ್ವ ಬಾಲಕಿ ಎಂಟು ವರ್ಷ ವಯಸಿನವಳೆಂದು ತಿಳಿದುಬಂದಿದೆ.