Kannada NewsLatestNational

*ಹಳಿ ದಾಟುವಾಗ ದುರಂತ: ರೈಲು ಡಿಕ್ಕಿಯಾಗಿ 8 ಜನರು ಸಾವು*

ಪ್ರಗತಿವಾಹಿನಿ ಸುದ್ದಿ: ರೈಲ್ವೆ ಹಳಿಗಳನ್ನು ದಾಟುವಾಗ ರೈಲು ಡಿಕ್ಕಿಯಾಗಿ 8 ಜನರು ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಇಲ್ಲಿನ ಮಿರ್ಜಾಪುರದಲ್ಲಿ ಈ ದುರಂತ ಸಂಭವಿಸಿದೆ. ರೈಲ್ವೆ ಅಧಿಕಾರಿಗಳ ಪ್ರಕಾರ ಪ್ರಯಾಣಿಕರು ರೈಲ್ವೆ ಪ್ಲಾಟ್ ಫಾರ್ಮ್ ನಲ್ಲಿ ಇಳಿಯದೇ ಎದುರು ಬದಿಯಲ್ಲಿ ಇಳಿದಿದ್ದು, ಈ ವೇಳೆ ಮತ್ತೊಂದು ರೈಲು ಬಂದು ಡಿಕ್ಕಿ ಹೊಡೆದಿದೆ. ದುರಂತದಲ್ಲಿ 8 ಜನರು ಸಾವನ್ನಪ್ಪಿದ್ದಾರೆ.

ಮೃತರು ಗಂಗಾನದಿಯಲ್ಲಿ ಪವಿತ್ರ ಸ್ನಾನಕ್ಕೆಂದು ವಾರಣಾಸಿಗೆ ತೆರಳುತ್ತಿದ್ದರು. ಚುನಾರ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.

Home add -Advt

Related Articles

Back to top button