Latest

*ರೈಲು ಡಿಕ್ಕಿ: ಆರು ಆನೆಗಳ ದುರಂತ ಸಾವು*

ಪ್ರಗತಿವಾಹಿನಿ ಸುದ್ದಿ: ವನ್ಯಜೀವಿ ಅಭಯಾರಣ್ಯದ ಬಳಿ ಪ್ಯಾಸೆಂಜ‌ರ್ ರೈಲು ಆನೆಯ ಹಿಂಡಿಗೆ ಡಿಕ್ಕಿ ಹೊಡೆದು ಆರು ಆನೆಗಳು ಸಾವನ್ನಪ್ಪಿರುವ ದಾರುಣ ಘಟನೆ ಶ್ರೀಲಂಕಾದಲ್ಲಿ ನಡೆದಿದೆ.

ಶ್ರೀಲಂಕಾ ರಾಜಧಾನಿ ಕೊಲಂಬೊದಿಂದ ಸುಮಾರು 200 ಕಿಲೋಮೀಟರ್ ಮಿನ್ನೇರಿಯಾ ಬಳಿ ಈ ಘಟನೆ ನಡೆದಿದೆ. ನಾಲ್ಕು ಮರಿ ಆನೆಗಳು ಮತ್ತು ಎರಡು ವಯಸ್ಕ ಆನೆಗಳು ಸಾವನ್ನಪ್ಪಿವೆ.

ಕೌದುಲಾ ಹಾಗೂ ವಸಗಾಮುವಾ ನಡುವೆ ಸಂಪರ್ಕ ಕಲ್ಪಿಸುವ, ವನ್ಯಜೀವಿ ಸಂರಕ್ಷಿತಾರಣ್ಯದೊಳಗೆ ಹಾದುಹೋಗುವ ಈ ರೈಲು ಹಳಿಯಲ್ಲಿ ಗುರುವಾರ ರೈಲು ಸಂಚಾರದ ವೇಳೆ ಹಳಿ ಪಕ್ಕದಲ್ಲಿ ಸಂಚರಿಸುತ್ತಿದ್ದ ಆನೆಗಳ ಹಿಂಡಿಗೆ ಟ್ರೈನ್ ಡಿಕ್ಕಿ ಹೊಡೆದ ಪರಿಣಾಮ ಆರು ಆನೆಗಳು ಸ್ಥಳದಲ್ಲೇ ಸಾವನ್ನಪ್ಪಿವೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button