National

*ವಸತಿ ಪ್ರದೇಶದಲ್ಲಿ ತರಬೇತಿ ವಿಮಾನ ಪತನ: ಪೈಲಟ್ ಸಾವು*

ಪ್ರಗತಿವಾಹಿನಿ ಸುದ್ದಿ: ಖಾಸಗಿ ವಾಯುಯಾನ ಅಕಾಡೆಮಿಗೆ ಸೇರಿದ ತರಬೇತಿ ವಿಮಾನವೊಂದು ಪತನಗೊಂಡಿದ್ದು, ತರಬೇತಿ ಪೈಲಟ್ ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.

ವರದಿಗಳ ಪ್ರಕಾರ, ಗುಜರಾತ್‌ನ ಅಮೇಲಿ ಜಿಲ್ಲೆಯ ವಸತಿ ಪ್ರದೇಶದಲ್ಲಿ ವಿಮಾನವು ಮರಕ್ಕೆ ಅಪ್ಪಳಿಸಿ, ಬೆಂಕಿ ಹೊತ್ತಿಕೊಂಡ ಬಳಿಕ ತೆರೆದ ಪ್ರದೇಶದಲ್ಲಿ ನೆಲಕ್ಕೆ ಬಿದ್ದಿದೆ. ವಿಮಾನ ಅಮೇಲಿ ವಿಮಾನ ನಿಲ್ದಾಣದಿಂದ ಹೊರಟಿದ್ದು ತರಬೇಟಿ ಪೈಲಟ್ ಒಂಟಿಯಾಗಿಯೇ ಹಾರಾಟ ನಡೆಸುತ್ತಿದ್ದರು ಎನ್ನಲಾಗಿದೆ.

Home add -Advt

ವಿಮಾನವು ಮಧ್ಯಾಹ್ನ 12:30 ರ ಸುಮಾರಿಗೆ ಅಮೇಲಿ ಪಟ್ಟಣದ ಗಿರಿಯಾ ರಸ್ತೆ ಪ್ರದೇಶದ ವಸತಿ ಪ್ರದೇಶಕ್ಕೆ ಅಪ್ಪಳಿಸಿದೆ ಎಂದು ಅಮೇಲಿ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಖರತ್ ತಿಳಿಸಿದ್ದಾರೆ. ಶಾಸ್ತ್ರಿ ನಗರ ಪ್ರದೇಶದ ಬಳಿ ಅಪಘಾತಕ್ಕೀಡಾದ ನಂತರ ವಿಮಾನವು ಬೆಂಕಿಗೆ ಆಹುತಿಯಾಯಿತು. ಅದರಲ್ಲಿದ್ದ ಪೈಲಟ್ ಸಾವನ್ನಪ್ಪಿದ್ದಾರೆ ಎಂದು ಖರತ್ ಹೇಳಿದ್ದಾರೆ.

ಸದ್ಯ ದುರ್ಘಟನೆಯಲ್ಲಿ ವಸತಿ ಪ್ರದೇಶದಲ್ಲಿದ್ದ ಯಾರಿಗೂ ಗಾಯಗಳಾಗಿಲ್ಲ. ಸ್ಥಳೀಯ ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣ ದಾಖಲಿಸಿಕೊಂಡು, ಅಪಘಾತಕ್ಕೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ತನಿಖೆ ಆರಂಭಿಸಿದ್ದಾರೆ.

Related Articles

Back to top button