*ನಡುರಸ್ತೆಯಲ್ಲಿ ಅರೆಬೆತ್ತಲಾಗಿ ಮಂಗಳಮುಖಿಯ ಪ್ರತಿಭಟನೆ; ಹೈಡ್ರಾಮಾಗೆ ಸುಸ್ತಾದ ಪೊಲೀಸರ ಪಾಡು ನೋಡಿ*

ಪ್ರಗತಿವಾಹಿನಿ ಸುದ್ದಿ: ಮಂಗಳಮುಖಿಯೊಬ್ಬರು ನಡುರಸ್ತೆಯಲ್ಲಿ ಅರೆಬೆತ್ತಲಾಗಿ ಬಸ್ ಕಂಡಕ್ಟರ್ ವಿರುದ್ಧ ಪ್ರತಿಭಟನೆ ನಡೆಸಿದ್ದು, ಹೈಡ್ರಾಮಾ ನೋಡಿ ಪೊಲೀಸರೇ ಬೇಸ್ತುಬಿದ್ದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ತಮಿಳುನಾಡು ಮೂಲದ ಮಂಗಳಮುಖಿಯೊಬ್ಬರು ಚಿಕ್ಕಬಳ್ಳಾಪುರದಲ್ಲಿ ನಡುರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಕೆ ಎಸ್ ಆರ್ ಟಿಸಿ ಬಸ್ ನಲ್ಲಿ ಮಂಗಳಮುಖಿ ಪ್ರಯಾಣಿಸುತ್ತಿದ್ದಾಗ ಕಂಡಕ್ಟರ್ ಮುಂದೆಹೋಗು ಎಂದು ಹೇಳಿದ್ದಾರೆ. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ, ವಾಗ್ವಾದ ಆರಂಭವಾಗಿದೆ. ಇದರಿಂದ ಬಸ್ ಕಂಡಕ್ಟರ್ ಮಂಗಳಮುಖಿಯನ್ನು ಬಸ್ ನಿಂದ ಕೆಳಗಿಳಿಸಿದ್ದಾರೆ. ಬಸ್ ನಿಂದ ಇಳಿದ ಮಂಗಳಮುಖಿ ಅರೆಬೆತ್ತಲಾಗಿ ಪ್ರತಿಭಟನೆ ಆರಂಭಿಸಿದ್ದು, ಕಂಡಕ್ಟರ್ ತನ್ನ ಮೊಬೈಲ್ ಹಾಗೂ ಹಣ ಕಿತ್ತುಕೊಂಡಿರುವುದಾಗಿ ಆರೋಪಿಸಿದ್ದಾರೆ. ಮೈಮೇಲಿರುವ ಶರ್ಟ್ ಬಿಚ್ಚಿ ಪ್ರತಿಭಟನೆ ಮಾಡುವುದಾಗಿ ಬೆದರಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಮಂಗಳಮುಖಿಯನ್ನು ವಶಕ್ಕೆ ಪಡೆದು ಸಮಾಧಾನಪಡಿಸಲು ಯತ್ನಿಸಿದ್ದಾರೆ. ಆದರೂ ಆಕೆ ಪ್ರತಿಭಟನೆ ಮುಂದುವರೆಸುತ್ತಿದ್ದಂತೆ ಪೊಲೀಸರು ಆಕೆಗೆ ಹೊಸ ಬಟ್ಟೆಕೊಡಿಸಿ, 500 ರೂಪಾಯಿ ಹಣಕೊಟ್ಟು ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ