Belagavi NewsBelgaum NewsKannada NewsKarnataka News

*ಬಸ್ ನಲ್ಲಿಯೇ ಸಾರಿಗೆ ಸಿಬ್ಬಂದಿ ಆತ್ಮಹತ್ಯೆಗೆ ಶರಣು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಲ್ಲಿರುವ ಡಿಪೋ 1 ರಲ್ಲಿ ಬಸ್ ನಲ್ಲಿಯೇ ಸಾರಿಗೆ ಸಿಬ್ಬಂದಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಬಸ್ ನ ಒಳಭಾಗದ ಕಬ್ಬಿನದ ಸೆಳೆಗೆ ಹಗ್ಗಕಟ್ಟಿ ನೇಣುಬಿಗಿದುಕೊಂಡು ಮೇಕಾನಿಕಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.‌ ಮೂಲತಃ ಧಾರವಾಡ ಜಿಲ್ಲೆಯ ನಿವಾಸಿ ಆಗುರುವ ಕೆ.ಟಿ. ಕಮಡೊಳ್ಳಿ ( 57) ಅವರು ಬೆಳಗಾವಿ ಗಾಂಧಿನಗರದಲ್ಲಿ ವಾಸವಾಗಿದ್ದರು.‌ ಕಳೆದ 33 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಮೆಕಾನಿಕಲ್ ಸಿಬ್ಬಂದಿ ಕಮಡೊಳ್ಳಿ ಅವರು, ಕೆಲಸದ ಅವಧಿ ಮುಗಿದರೂ ಮನೆಗೆ ಹೋಗದಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ.‌ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಮಾರ್ಕೆಟ್ ಠಾಣೆ ಪಿಎಸ್ಐ ವಿಠ್ಠಲ ಹಾವನ್ನವರ ಭೇಟಿ, ಪರಿಶೀಲನೆ ನಡೆಸಿದ್ದಾರೆ.‌

Related Articles

Back to top button